ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡಗಳ ಬಗ್ಗೆ ಗುಡುಗಿದ ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಮ೦ಗಳವಾರದ೦ದು ಕಳೆದ 15 ದಿನಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಯವರು ಎಲ್ಲ ನಗರಸಭೆ ಸಹಿತ ಎಲ್ಲಾ ಅಧಿಕಾರಿಗಳ ಸಭೆಯನ್ನು ನಡೆಸಿ ಉಡುಪಿ ಉಡುಪಿ ನಗರದಲ್ಲಿ ಸೆಟ್ ಬ್ಯಾಕ್ ಇಲ್ಲದೆ ಪಾರ್ಕಿಂಗ್ ಇಲ್ಲದಂತಹ ಕಟ್ಟಡಗಳ ಐವತ್ತ ಎಂಟು ಕಟ್ಟಡಗಳಿಗೆ(58) ನೋಟಿಸ್ ಜಾರಿಗೊಳಿಸಬೇಕೆಂದು ನಗರಸಭೆಗೆ ತಿಳಿಸಿತ್ತಾರೆ.
ಅದರ ಬಗ್ಗೆ ನಗರಸಭಾ ಅಧಿವೇಶನದಲ್ಲಿ ಪ್ರಶ್ನಿಸಿದ ಸುರೇಶ್ ಶೆಟ್ಟಿ ಬನ್ನಂಜೆ ಇವರು ಸಿರಿಬೀಡು ವಾರ್ಡಿನಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಅನಂತ ರೆಸಿಡೆನ್ಸಿಗೆ ಯಾವ ರೀತಿಯಲ್ಲಿ ಪರ್ಮಿಷನ್ ಕೊಟ್ಟಿದ್ದೀರಿ. ಹಾಗೇ ಶಿರಿಬಿಡುವಿನಲ್ಲಿ ಇರುವ ಚಿತ್ತಾರ ಕಂಪೋರ್ಟ್ಸ ಹೋಟೆಲ್ ನ ವರು ಸೆಟ್ ಬ್ಯಾಕ್ ಬಿಟ್ಟ ಸ್ಥಳದಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಸ್ಥಳೀಯವಾಗಿ ರಸ್ತೆ ಬ್ಲಾಕ್ ಆಗುತ್ತದೆ ಎಂದು ಸಭೆಯಲ್ಲಿ ತಿಳಿಸಿರುತ್ತಾರೆ.
ಮಾತ್ರವಲ್ಲದೆ ಕ್ಲಾಕ್ ಟವರ್ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮಾಂಡವಿ ಕಟ್ಟಡದವರು ಕಟ್ಟಡದ ಎದುರಿದ್ದ ನಗರಸಭಾ ರಸ್ತೆಯನ್ನೇ ಜಲ್ಲಿ ಮತ್ತು ಡಮಾರ ಹಾಕಿ ಅದನ್ನು ಎತ್ತರಿಸಿರುತ್ತಾರೆ ನಗರ ಸಭೆ ರಸ್ತೆಯನ್ನು ಏಕಾಏಕಿ ಇವರಿಗೆ ಮನಬಂದಂತೆ ಏರಿಸಿರುತ್ತಾರೆ ಇದು ಮುಂದಿನ ದಿನಗಳಲ್ಲಿ ಇಲ್ಲಿ ಪಾರ್ಕಿಂಗ್ ಅನ್ನು ಪರ್ಮನೆಂಟ್ ಮಾಡುವ ಉದ್ದೇಶ ಇದೆ.ಈ ಎಲ್ಲದರ ಬಗ್ಗೆ ಕೂಡಲೇ ಅಧಿಕಾರಿಗಳು ನಮಗೆ ಮಾಹಿತಿಯನ್ನು ಕೊಡಬೇಕೆಂದು ಸಭೆಯಲ್ಲಿ ಆಗ್ರಹಿಸಿರುತ್ತಾರೆ. ಈ ಎಲ್ಲಾ ಕಟ್ಟಡಗಳ ಅವ್ಯವಹಾರವನ್ನು ನಗರಸಭೆಯ ಅಧಿಕಾರಿಗಳಾಗಲಿ ಹಾಗೂ ಅಧ್ಯಕ್ಷರಾಗಲಿ ನೋಡಿಯು ನೋಡದಂತೆ ಕುಳಿತಿರುವುದು ನಮ್ಮ ಉಡುಪಿ ಜನರ ದುರಾದೃಷ್ಟ ಎಂದು ಸಭೆಯಲ್ಲಿ ತಿಳಿಸಿ ಕೂಡಲೇ ಇದಕ್ಕೆ ಉತ್ತರವನ್ನು ಕೊಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಉಡುಪಿಯ ಶಾಸಕರು ಹಾಗೂ ನಗರಸಭೆಯ ಅಧ್ಯಕ್ಷರು ಉತ್ತರಿಸಲಾಗದೆ ಚಡಪಡಿಸಿದ ದೃಶ್ಯವ೦ತೂ ಸಾಮಾನ್ಯಸಭೆಯಲ್ಲಿ ಮೌನಕ್ಕೆ ಜಾರಿತು.