ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬಸ್ -ಬುಲೆರೋ ನಡುವೆ ಭೀಕರ ಅಪಘಾತ : 10 ಮಂದಿ ಮೃತ್ಯು : 19 ಜನರು ಗಂಭೀರ ಗಾಯ
ಮಿರ್ಜಾಪುರ್: ಛತ್ತಿಸ್ಗಢದಿಂದ ಪ್ರಯಾಗರಾಜ್ಗೆ ಹೊರಟಿದ್ದ ಸಮಯದಲ್ಲಿ ಬಸ್ – ಬುಲೆರೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಸುಮಾರು 10 ಜನರ ಅಸುನೀಗಿದ್ದು. 19 ಜನರು ಭೀಕರವಾಗಿ ಗಾಯಗೊಂಡ ಘಟನೆ ಪ್ರಯಾಗರಾಜ್ ಹಾಗೂ ಮಿರ್ಜಾಪುರ್ ಹೆದ್ದಾರಿಯಲ್ಲಿ ನಡೆದಿದೆ.
ಛತ್ತೀಸ್ಗಢದ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅಂತ ಪ್ರಯಾಣ ಬೆಳೆಸಿದ್ದರು. ಇತ್ತ ಪ್ರಯಾಗ್ರಾಜ್ಗೆ ಹೊರಟಿದ್ದ ಬಸ್ನಲ್ಲಿಯೂ ಕೂಡ ರಾಜಘರ್ ಹಾಗೂ ಮಧ್ಯಪ್ರದೇಶದ ಭಕ್ತಾದಿಗಳು ಕೂಡ ಇದ್ದರು ಎಂದು ತಿಳಿದು ಬಂದಿದೆ.
ಹತ್ತು ಜನರನ್ನು ಕರೆದುಕೊಂಡು ಹೋಗಿತ್ತಿದ್ದ ಬುಲೆರೋ ಕಾರ್ನಲ್ಲಿದ್ದ ಎಲ್ಲಾ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಪಕ್ಕದಲ್ಲಿರುವ ಸ್ವರೂಪ ರಾಣಿ ಮೆಡಿಕಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಾಳುಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪ್ರಯಾಗರಾಜ್ನ ಹೆಚ್ಚುವರಿ ಎಸ್ಪಿ ವಿವೇಕ್ ಯಾದವ್ ಹೇಳಿದ್ದಾರೆ.
ಇನ್ನು ಭೀಕರ ಅಪಘಾತದ ಸುದ್ದಿ ತಿಳಿದ ಸಿಎಂ ಯೋಗಿ ಆದಿತ್ಯನಾಥ್, ಆಡಳೀತಾಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸುವಂತೆ ಸೂಚನೆ ನಿಡಿದ್ದಾರೆ. ಅಲ್ಲದೇ ಆಗಬೇಕಾದ ರಕ್ಷಣಾ ಕಾರ್ಯವನ್ನು ತತಕ್ಷಣ ಕೈಗೊಳ್ಳಿ ಎಂದು ಹೇಳಿದ್ದಾರೆ.ಅಲ್ಲದೇ ವೈದ್ಯಕೀಯ ಸಿಬ್ಬಂದಿಗೆ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.