ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
HAL ನಿರ್ಮಿತ ಸ್ವದೇಶಿ ತರಬೇತಿ ವಿಮಾನದಲ್ಲಿ ತೇಜಸ್ವಿ ಸೂರ್ಯ ಹಾರಾಟ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2025 ರಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ಸ್ವದೇಶಿ ನಿರ್ಮಿತ ತರಬೇತಿ ವಿಮಾನವಾದ HTT-40ಯಲ್ಲಿ ಹಾರಾಟ ನಡೆಸಿದರು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿರ್ಮಿಸಿದ ವಿಮಾನದಲ್ಲಿ ತೇಜಸ್ವಿ ಸೂರ್ಯ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಗಮನ ಸೆಳೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ, HAL ಬೆಂಗಳೂರಿನ ಹೆಮ್ಮೆ ಮತ್ತು ಭಾರತದ ಹೆಮ್ಮೆ ಮತ್ತು ಭಾರತದ ವೈಮಾನಿಕ ಪ್ರಗತಿಯ ಸಂಕೇತ ಎಂದು ಶ್ಲಾಘಿಸಿದರು.
“ಇಂದು ನನಗೆ ನಮ್ಮದೇ HAL ನಿರ್ಮಿಸಿದ HTT 40 ನಲ್ಲಿ ಹಾರಾಟ ನಡೆಸುವ ಅವಕಾಶ ಸಿಕ್ಕಿತು. HAL ಭಾರತದ ಹೆಮ್ಮೆ. ಇದು ಬೆಂಗಳೂರಿನ ಹೆಮ್ಮೆ” ಎಂದು ಹೇಳಿದರು.
2012 ರಲ್ಲಿ ಯುಪಿಎ ಸರ್ಕಾರವು ಸ್ವಿಸ್ ಕಂಪನಿಯಿಂದ ತರಬೇತಿ ಜೆಟ್‌ಗಳನ್ನು ಖರೀದಿಸಿತ್ತು. ಇದರಿಂದ ದೇಶಿಯ ವಿಮಾನ ತಯಾರಿಕಾ ಯೋಜನೆ ಭಾರಿ ಹಿನ್ನೆಡೆ ಅನುಭವಿಸಿತ್ತು. ಆದರೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಎಚ್ಎಎಲ್ ಗೆ ಉತ್ತೇಜನ ಲಭಿಸಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.