....ನಾಲ್ಕುದಿನಗಳ ಬ್ಯಾ೦ಕ್ ಬ೦ದ್...ಶ್ರೀಗೌರಿಗಣೇಶ ಹಬ್ಬಕ್ಕೆ ಭಕ್ತರಿ೦ದ ಸಕಲ ಸಿದ್ದತೆ...ಶ್ರೀಗಣೇಶ ವಿಗ್ರಹ ತಯಾರಿಕೆಯಲ್ಲಿ ತಲ್ಲೀನ ರಾಗಿರುವ ವಿಗ್ರಹ ರಚನೆಗಾರರು...

ಸಂತೋಷ್ ನೋಟಗಾರ್ ಏಷ್ಯನ್ ವಿಕಿ ಸೋರ್ಸ್ ಸಮ್ಮೇಳನಕ್ಕೆ ಆಯ್ಕೆ

ಮಂಗಳೂರು, ಫೆ.12: ಸಂತ ಅಲೋಶಿಯಸ್ ಯುನಿವರ್ಸಿಟಿಯ ಕಂಪ್ಯೂಟರ್ ಅನಿಮೇಶನ್ ಮುಖ್ಯಸ್ಥರಾದ ಸಂತೋಷ್ ನೋಟಗಾರ್ ಅವರು ಇಂಡೋನೇಷಿಯಾದ ಬಾಲಿಯಲ್ಲಿ ಫೆ.14 ರಿಂದ ಫೆ.16 ರವರೆಗೆ ನಡೆಯುವ ವಿಕಿ ಸೋರ್ಸ್ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ವಿಕಿಪೀಡಿಯ ಏಷ್ಯನ್ ಮಾಸಿಕದ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ನೇತೃತ್ವದಲ್ಲಿ ದಕ್ಷಿಣ ಏಷ್ಯಾದಲ್ಲಿ ಒಂದು ಸಾವಿರಕ್ಕೂ ಅಧಿಕ ವಿಕಿಪೀಡಿಯ ಆರ್ಟಿಕಲ್ ಗಳು ರಚನೆಯಾಗಿವೆ. ಇವರು ಅಲೋಶಿಯಸ್ ಯುನಿವರ್ಸಿಟಿಯ ವಿಕಿಪೀಡಿಯ ವಿದ್ಯಾರ್ಥಿಗಳ ಸಮೂಹದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

No Comments

Leave A Comment