ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಾಯಣಿ ನದಿ ಸೇತುವೆಯೊಂದು ಭಾನುವಾರ ಕುಸಿದು ಬಿದಿದ್ದು, ನಾಲ್ವರು ಪ್ರವಾಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ......
ಉಡುಪಿ: ಖಾಸಗಿ ಶಾಲೆಯ ಇಮೇಲ್ ಗೆ ಬಾಂಬ್ ಬೆದರಿಕೆ; ಪೊಲೀಸರಿಂದ ತಪಾಸಣೆ
ಉಡುಪಿ: ಉಡುಪಿ ಕುಂಜಿಬೆಟ್ಟುವಿನ ರೆಸಿಡೆನ್ಸಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಲಾ ಕಟ್ಟಡವನ್ನು ತಪಾಸಣೆ ನಡೆಸುತ್ತಿದ್ದಾರೆ.
ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಮೈದಾನದ ಸಮೀಪದ ಖಾಸಗಿ ಶಾಲೆಯ ಇಮೇಲ್ ಗೆ ಬಾಂಬ್ ಸ್ಪೋಟದ ಸಂದೇಶ ಬಂದಿದ್ದು, ಇದನ್ನು ಗಮನಿಸಿದ ಶಾಲೆಯವರು ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಮೈದಾನದಲ್ಲಿ ಇರಿಸಿದ್ದಾರೆ.
ಬಾಂಬ್ ಸ್ಫೋಟದ ಬೆದರಿಕೆ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಅಲರ್ಟ್ ಆಗಿದ್ದು ಸ್ಥಳಕ್ಕೆ ಆಗಮಿಸಿ ಶ್ವಾನದಳದೊಂದಿಗೆ ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿದರು. ಆದರೆ ಬಾಂಬೆಗೆ ಸಂಬಂಧಪಟ್ಟ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಸುಮಾರು 600ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು ಇವರನ್ನೆಲ್ಲ ಶಾಲೆಯ ಮೈದಾನದಲ್ಲಿ ಇರಿಸಲಾಗಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಈ ಶಾಲೆಯ ಸಮೀಪದಲ್ಲಿರುವ ವಿದ್ಯಾ ಸಂಸ್ಥೆಯ ಮಕ್ಕಳನ್ನು ಕೂಡ ಹೊರಗಡೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.