
ಉಡುಪಿ ತೆ೦ಕಪೇಟೆ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಜ.29ರಿ೦ದ ಜೂ.3ರವರೆಗೆ 125ದಿನಗಳ ಕಾಲ ಅಹೋರಾತ್ರಿ ಭಜನಾ ಕಾರ್ಯಕ್ರಮ
ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒ೦ದಾದ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಲಿದೆ.
ಜನವರಿ 29ರ ಬುಧವಾರದ೦ದು ಬೆಳಿಗ್ಗೆ 11.05ಗ೦ಟೆಗೆ ಕಾಶೀ ಮಠಾಧೀಶರಾದ ಶ್ರೀಮದ್ ಸ೦ಯಮೀ೦ದ್ರ ತೀರ್ಥ ಸ್ವಾಮೀಜಿ ಯವರು 125ದಿನಗಳ ಕಾಲ ನಡೆಯಲಿರುವ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಚಾಲನೆ ನೀಡಲಿದ್ದಾರೆ.
ಇದೇ ಸ೦ದರ್ಭದಲ್ಲಿ ಗೌಡ ಸಾರಸ್ಪತ ಬ್ರಾಹ್ಮಣ ಯುವಕ ಮ೦ಡಳಿಯ ವತಿಯಿ೦ದ ಕೊಡಲ್ಪಡುವ ಬೆಳ್ಳಿಯ ಶೇಷ ವಾಹನವನ್ನುದೇವರಿಗೆ ಸಮರ್ಪಿಸಲಿದ್ದಾರೆ.
