ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವ

ಕುಂದಾಪುರ: ಶ್ರೀರಾಮ ಪಟ್ಟಾಭಿಷೇಕೋತ್ಸವದ ಪ್ರಥಮ ವಾರ್ಷಿಕೋತ್ಸವವನ್ನು ಜ.22 ರಂದು ಹಂಗ್ಲೂರು ವೆಂಕಟಲಕ್ಷ್ಮಿ ಸಭಾಗೃಹದ ಆವರಣದಲ್ಲಿ ನಡೆದ ಯಕ್ಷಗಾನ ರಂಗದಲ್ಲಿ ಉತ್ಸವವಾಗಿ ಆಚರಿಸಲಾಯಿತು.

ಹೇಮಾವತಿ, ಚಂದ್ರಶೇಖರ ಐತಾಳರ ಸೇವೆ ಬಯಲಾಟವಾಗಿ ಕಾರುಣ್ಯಾಂಬುಧಿ ಶ್ರೀರಾಮ ಪ್ರಸಂಗದೊಂದಿಗೆ ಶ್ರೀರಾಮ ಪಟ್ಟಾಭಿಷೇಕ ನಡೆಯಿತು. ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ, ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಮೇಳದ ಮೆನೇಜರ್ ರಾದ ಗಿರೀಶ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಅವರ ಸಲಹೆಯಂತೆ ,ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರು ಪ್ರಸಂಗ ಸಂಯೋಜಿಸಿ, ವಿಶೇಷವಾಗಿ ಪಟ್ಟಾಭಿಷೇಕವನ್ನು ಆಚರಿಸಿದರು.

ಶ್ರೀರಾಮನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ,ಸಂಘಟಕ ,ವಿದ್ವಾಂಸರಾದ ಉಜಿರೆ ಅಶೋಕ ಭಟ್ ಅವರು ಶ್ರೀರಾಮಚಂದ್ರನ ಆದರ್ಶ, ರಾಮರಾಜ್ಯ ಕಲ್ಪನೆ, ಸಮಾಜದ ಉದ್ದಾರ, ಮುಂತಾದ ವಿಷಯಗಳನ್ನು ಪ್ರಧಾನವಾಗಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಮೇಳದ ಹಿತೈಷಿಗಳು ಅಭಿಮಾನಿಗಳು ಆದಂತಹ ಶ್ರೀ ದಾಮೋದರ್ ಶರ್ಮ ಬಾರ್ಕೂರು, ಸೇವಾಕರ್ತರಾದ ಶ್ರೀ ಕೃಷ್ಣಮೂರ್ತಿ ನಾವಡ ಕಟ್ಕೆರೆ ಮುಂತಾದವರು ವಿವಿಧ ಪಾತ್ರದಲ್ಲಿ ರಂಗದಲ್ಲಿ ಕಾಣಿಸಿಕೊಂಡರು. ಮೇಳದ ಮೆನೇಜರ್ ಗಿರೀಶ್ ಹೆಗಡೆ ಪುಷ್ಪರಾಜ ಶೆಟ್ಟಿ ವಿಶೇಷವಾಗಿ ಭರತ, ಲಕ್ಷ್ಮಣ ನ ಪಾತ್ರ ನಿರ್ವಹಿಸಿದರು, ಅಲ್ಲದೆ ಮೇಳದ ಹಿರಿಯ, ಕಿರಿಯ ಎಲ್ಲಾ ಕಲಾವಿದರು ,ಸಿಬ್ಬಂದಿಗಳು ಉತ್ಸಾಹದಲ್ಲಿ ಭಾಗಿಯಾದರು.

No Comments

Leave A Comment