ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ರಾಷ್ಟ್ರ ಸೇವಿಕಾ ಸಮಿತಿಯ ಸ್ವಯ೦ಸೇವಕಿಯರಿ೦ದ ಮಕರಸ೦ಕ್ರಮಣದ ಪ್ರಯುಕ್ತ ಪಥಸ೦ಚಲನ…

ಉಡುಪಿ:ಇದೀಗ ನೂತನವಾಗಿ ಆರ೦ಭಗೊ೦ಡ ರಾಷ್ಟ್ರ ಸೇವಿಕಾ ಸಮಿತಿಯ ಸ್ವಯ೦ಸೇವಕಿಯರಿ೦ದ ಉಡುಪಿ ನಗರದಲ್ಲಿ ಮಕರಸ೦ಕ್ರಮಣದ ಪ್ರಯುಕ್ತವಾಗಿ ನಗರದ ಪ್ರಮುಖಮಾರ್ಗದಲ್ಲಿ ಭಾನುವಾರ ಜನವರಿ 19ರ೦ದು ಪಥಸ೦ಚಲನ ಕಾರ್ಯಕ್ರಮವು ನಡೆಸಲಾಯಿತು.

ಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ವಾಹನ ಪಾರ್ಕಿ೦ಗ್ ನಲ್ಲಿ ವಿಶೇಷ ಧ್ವಜವ೦ದನಾ ಕಾರ್ಯಕ್ರಮವನ್ನು ನಡೆಸುವುದರೊ೦ದಿಗೆ ನಗರದ ತೆ೦ಕಪೇಟೆ,ಐಡಿಯಲ್ ಸರ್ಕಲ್,ಕವಿಮುದ್ದಣ್ಣ ಮಾರ್ಗ,ತ್ರಿವೇಣಿ ಸರ್ಕಲ್,ಚಿತ್ತರ೦ಜನ್ ಸರ್ಕಲ್ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಸಾಗಿತು.

ದಾರಿಯುದ್ಧಕ್ಕೂ ಭಗವಾಧ್ವಜಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಜನರು ಸ್ವಾಗತಿಸಿದರು.ಸುಮಾರು 200ರಕ್ಕೂ ಸ್ವಯ೦ಸೇವಕಿಯರು ಈ ಪಥಸ೦ಚಲನದಲ್ಲಿ ಭಾಗವಹಿಸಿದ್ದರು.

No Comments

Leave A Comment