ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
Champions Trophy 2025: ಭಾರತ ಸೇರಿದಂತೆ 7 ತಂಡಗಳು ಪ್ರಕಟ; ಟೀಂ ಇಂಡಿಯಾದಲ್ಲಿ ಯಾರ್ಯಾರಿಗೆ ಸ್ಥಾನ?
ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಕೊನೆಗೂ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ತಂಡವನ್ನು ಈ ಐಸಿಸಿ ಈವೆಂಟ್ಗೆ ಬಿಸಿಸಿಐ ಆಯ್ಕೆ ಮಾಡಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇದೀಗ ಟೀಂ ಇಂಡಿಯಾ ಪ್ರಕಟಣೆಯ ಜೊತೆಗೆ ಒಟ್ಟು 7 ತಂಡಗಳ ಪಟ್ಟಿ ಹೊರಬಿದ್ದಂತ್ತಾಗಿದೆ. ಉಳಿದಂತೆ ಆತಿಥೇಯ ಪಾಕಿಸ್ತಾನ ಮಾತ್ರ ಇದುವರೆಗೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಪಾಕಿಸ್ತಾನವನ್ನು ಹೊರತುಪಡಿಸಿ ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಮ್ಮ ತಮ್ಮ ತಂಡಗಳನ್ನು ಘೋಷಿಸಿದ್ದು, ಪ್ರತಿಯೊಂದು ತಂಡದಲ್ಲೂ ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಎಂಬುದರ ವಿವರ ಇಲ್ಲಿದೆ.
7 ತಂಡಗಳ ಪಟ್ಟಿ ಹೀಗಿದೆ
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೊನ್ ಕಾನ್ವೆ, ಟಾಮ್ ಲೇಥಮ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ವಿಲ್ ಯಂಗ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ನಾಥನ್ ಸ್ಮಿತ್, ಲಾಕಿ ಫರ್ಗುಸನ್, ಬೆನ್ ಸೀರ್ಸ್, ವಿಲಿಯಂ ಒರೋಕ್, ಮ್ಯಾಟ್ ಹೆನ್ರಿ, ಮೈಕೆಲ್ ಬ್ರೇಸ್ವೆಲ್.