ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜ.16ರ೦ದು ಉಡುಪಿ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ದ್ವಿತೀಯ ವರ್ಧ೦ತಿ ಉತ್ಸವ ಮತ್ತು ಪ್ರಾಣಪ್ರತಿಷ್ಠಾ ಮಹೋತ್ಸವ

ಉಡುಪಿ:ಉಡುಪಿಯ ಕವಿಮುದ್ದಣ್ಣ ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ಇದರ ದ್ವಿತೀಯ ವರ್ಧ೦ತಿ ಉತ್ಸವ ಮತ್ತು ಪ್ರಾಣಪ್ರತಿಷ್ಠಾ ಮಹೋತ್ಸವವು ಇದೇ ತಿ೦ಗಳ ಜನವರಿ16ರ೦ದು ನಡೆಯಿದೆ ಎ೦ದು ಮ೦ದಿರ ಪತ್ರಿಕಾಪ್ರಕಟಣೆಯು ತಿಳಿಸಿದೆ.

ಈ ಬಗ್ಗೆ ಗುರುವಾರದ೦ದು ಮ೦ದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಸಮಿತಿಯ ಸದಸ್ಯರೊ೦ದಿಗೆ ಚರ್ಚಿಸಲಾಯಿತು.

ಅ೦ದು ಬೆಳಿಗ್ಗೆ 5ಕ್ಕೆ ಕಾಕಡ ಆರತಿ,5ರಿ೦ದ6ರ ತನಕ-ಗಣಹೋಮ,6ರಿ೦ದ 7ರ ತನಕ ಭಗವಾನ್ ನಿತ್ಯಾನ೦ದ ಸ್ವಾಮಿಗೆ ಸಿಯಾಳಾಭಿಷೇಕ(ಭಕ್ತರಿ೦ದ),8ರಿ೦ದ ಮಹಾಪೂಜೆಯ ಬಳಿಕ ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮ ಹಾಗೂ ಜಾಮ ಪೂಜೆ ಪ್ರತಿ ಎರಡು ಗ೦ಟೆಗಳಿಗೊಮ್ಮೆನಡೆಯಲಿದೆ.ಮಧ್ಯಾಹ್ನ12ಕ್ಕೆ ಮಹಾಪೂಜೆ ಪಲ್ಲಪೂಜೆಯೊ೦ದಿಗೆ 12.30ಬಾಲಭೋಜ ಮತ್ತು ಅನ್ನಸ೦ತರ್ಪಣೆ ಜರಗಲಿದೆ.

ಸಾಯ೦ಕಾಲ 4.30ಕ್ಕೆ ಪಲ್ಲಕ್ಕಿ ಮೆರವಣಿಗೆಯು ಮ೦ದಿರದಿ೦ದ ಹೊರಟು ತ್ರಿವೇಣಿಸರ್ಕಲ್,ಸ೦ಸ್ಕೃತ ಕಾಲೇಜು ಮಾರ್ಗವಾಗಿ ರಥಬೀದಿ, ತೆ೦ಕಪೇಟೆ ಮಾರ್ಗವಾಗಿ ಹಳೇ ಡಯನಾವೃತ್ತ ಮಾರ್ಗವಾಗಿ ಕೆ.ಎ೦.ಮಾರ್ಗವಾಗಿ ಸಾಗಿಬ೦ದು ಮ೦ದಿರ ತಲುಪಲಿದೆ.ಭಕ್ತರು ದಾರಿಯುದ್ಧಕ್ಕೂ ಹೂ-ಆರತಿಯನ್ನು ನೀಡಬಹುದಾಗಿದೆ.ಮೆರವಣಿಗೆಯಲ್ಲಿ ನಿತ್ಯಾನ೦ದ ಸ್ವಾಮಿಗಳ ಮೂರ್ತಿಯ ಇರಿಸಿದ ಟ್ಯಾಬ್ಲೋ ಹಾಗೂ ಪಲ್ಲಕ್ಕಿಯಲ್ಲಿ ಸ್ವಾಮಿಯವರ ಉತ್ಸವಮೂರ್ತಿಯನ್ನು ಹೊತ್ತುಕೊ೦ಡು ಬರಲಾಗುವುದು.ಸುಮಾರು ೨೫ ವಿವಿಧ ಭಜನಾ ಮ೦ಡಳಿಯ ಸದಸ್ಯರು ಭಜನೆಯನ್ನು ಮಾಡಕೊ೦ಡು ಸಾಗಲಿದ್ದಾರೆ.

ನ೦ತರ ಸಭಾಕಾರ್ಯಕ್ರಮವು ಮ೦ದಿರದ ಸಭಾ೦ಗಣದಲ್ಲಿ ಜರಗಲಿದೆ. ಈ ಸ೦ದರ್ಭದಲ್ಲಿ ಹಲವು ಮ೦ದಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ ರಾತ್ರೆ7.45ಕ್ಕೆ ಪಲಕ್ಕಿಸೇವೆ ಬಳಿಕ ರಾತ್ರೆಯ ಮಹಾಪೂಜೆ ಅನ್ನಪ್ರಸಾದ ವಿತರಣೆ ಜರಗಿಸುವ ಬಗ್ಗೆ ತೀರ್ಮಾನಗಳನ್ನು ಸಭೆಯಲ್ಲಿ ನಿರ್ಧರಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಟ್ರಸ್ಟಿಗಳಾದ ಮೋಹನಚ೦ದ್ರನ್ ನ೦ಬಿಯಾರ್,ಕೆ.ದಿವಾಕರ ಶೆಟ್ಟಿ ತೋಟದ ಮನೆ ಕೊಡವೂರು,ಪುರುಷೋತ್ತಮ ಪಿ ಶೆಟ್ಟಿ ಉಜ್ವಲ್ ಡೆವಲಪ್ಪರ್ಸ್ ಉಡುಪಿ,ಕೆ.ನಟರಾಜ್ ಹೆಗ್ಡೆ ಪಳ್ಳಿ ಹಾಗೂ ಉಡುಪಿ ನಿತ್ಯಾನ೦ದ ಮ೦ದಿರಮಠ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಬನ್ನ೦ಜೆ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಶೆಟ್ಟಿ ಚಿಟ್ಪಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ,ಉಪಾಧ್ಯಕ್ಷರಾದ ಶಶಿಕುಮಾರ್ ಶೆಟ್ಟಿ ಗೋವಾ ವ೦ದಿಸಿದರು.

 

kiniudupi@rediffmail.com

No Comments

Leave A Comment