37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...

ಉಡುಪಿ ಶ್ರೀಕೃಷ್ಣಮಠದಲ್ಲಿ ತೆಪ್ಪೋತ್ಸವದೊ೦ದಿಗೆ ವಾರ್ಷಿಕ ಸಪ್ತೋತ್ಸವಕ್ಕೆ ಅದ್ದೂರಿಯ ಚಾಲನೆ…

ಉಡುಪಿ:ಜ.10: ಪರ್ಯಾಯ ಶ್ರೀಪುತ್ತಿಗೆಮಠದ ಆಶ್ರಯದಲ್ಲಿ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಗುರುವಾರದ೦ದು ಪ್ರಾರಂಭ ಗೊಂಡಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವದೊ೦ದಿಗೆ ನಡೆದು ಬಳಿಕ ಎರಡು ರಥಗಳ ರಥೋತ್ಸವ ನಡೆಯಿತು.ಈ ಸ೦ದರ್ಭದಲ್ಲಿ ಆಕರ್ಷಕ ಸುಡುಮದ್ದನ್ನು ಸುಡಲಾಯಿತು.

ವಾರ್ಷಿಕ ಸಪ್ತೋತ್ಸವ ಇಂದಿನಿಂದ ಜ.15ರವರೆಗೆ ನಡೆಯಲಿದೆ. ಜ.14ರಂದು ಮಕರ ಸಂಕ್ರಮಣದಂದು ಮೂರು ತೇರು ಉತ್ಸವ ನಡೆದರೆ, ಜ.15ರಂದು ಚೂರ್ಣೋತ್ಸವ ಹಗಲು ತೇರು ನಡೆಯಲಿದೆ.

ರಥಬೀದಿಯ ಸುತ್ತಲೂ ವಿಶೇಷ ಕುಣಿತ ಭಜನೆ ‘ವೈಭವೋತ್ಸವ’ ಈ ಬಾರಿ ನಡೆಯಲಿದೆ. ಇದರೊಂದಿಗೆ ಅಹಲ್ಯಾ ಬಾಯಿ ಹೋಳ್ಕರ್ ಅವರ ಜನ್ಮತ್ರಿಶತಾಬ್ದಿ ಪ್ರಯುಕ್ತ ವಿವಿಧ ಸ್ಪರ್ಧೆಗಳು ರಾಜಾಂಗಣದಲ್ಲಿ ನಡೆಯಲಿದೆ. ಅಲ್ಲದೇ ಪ್ರತಿದಿನ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ರಾಜಾಂಗಣದಲ್ಲಿ ನಡೆಯಲಿದೆ.

 

No Comments

Leave A Comment