ಹರಿಯಾಣ, ಗೋವಾ, ಲಡಾಖ್ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!
Tirupati stampede: ತಿರುಪತಿ ಕಾಲ್ತುಳಿತ ಪ್ರಕರಣದ ಸಂತ್ರಸ್ಥರಿಗೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ: ಆಂಧ್ರ ಪ್ರದೇಶ ಸರ್ಕಾರ
ತಿರುಪತಿ: ಆಂಧ್ರ ಪ್ರದೇಶದ ತಿರುಪತಿಯಲ್ಲಿ ಜನವರಿ 8ರಂದು ಬುಧವಾರ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಸಾವಿಗೀಡಾದವರಿಗೆ ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ತಿರುಪತಿಯಲ್ಲಿ ಮೊದಲ ಬಾರಿಗೆ ವ್ಯಾಪಕ ಕಾಲ್ತುಳಿತ ಸಂಭವಿಸಿ ಕರ್ನಾಟಕದ ಮೂಲದ ಓರ್ವ ಮಹಿಳೆ ಸೇರಿದಂತೆ ಬರೊಬ್ಬರಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವೈಕುಂಠ ದ್ವಾರ ದರ್ಶನ ಟೋಕನ್ ವಿತರಣಾ ಕೇಂದ್ರಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಭೇಟಿ
ಇನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಅವರು ಗುರುವಾರ ತಿರುಪತಿಗೆ ಭೇಟಿ ನೀಡಲಿದ್ದು, ಘಟನಾ ಸ್ಥಳದ ಪರಿಶೀಲನೆ ಹಾಗೂ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಅವರು ಗುರುವಾರ ತಿರುಪತಿಗೆ ಭೇಟಿ ನೀಡಲಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿರುವ ಚಂದ್ರಬಾಬು ನಾಯ್ಡು, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಲಿದ್ದಾರೆ. ಜೊತೆಗೆ ಸಾವಿಗೀಡಾದವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಸರ್ಕಾರದಿಂದ ಪರಿಹಾರ ಘೋಷಣೆ
ಇನ್ನು ಸಾವಿಗೀಡಾದ ಕುಟುಂಬಸ್ಥರಿಗೆ ಅಲ್ಲಿನ ಮುಜರಾಯಿ ಇಲಾಖೆ ಗುರುವಾರ ಪರಿಹಾರ ಘೋಷಿಸಿದೆ. ಸಿಎಂ ಚಂದ್ರಬಾಬು ನಾಯ್ಡು ಅವರು ಖುದ್ಧಾಗಿ ದುಃಖತಪ್ತ ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ ಸಾವಿಗೀಡಾದವರಿಗೆ ಆಂಧ್ರ ಪ್ರದೇಶ ಸರಕಾರದ ಮುಜುರಾಯಿ ಇಲಾಖೆ ಜನವರಿ 9ರಂದು ಗುರುವಾರ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇನ್ನು ಮುಜುರಾಯಿ ಸಚಿವ ಅನಂ ರಾಮನಾರಾಯಣ ರೆಡ್ಡಿ ತಿರುಪತಿಗೆ ಧಾವಿಸಿದ್ದಾರೆ.
ತಿರುಪತಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಕಂದಾಯ ಸಚಿವ ಅನಗಣಿ ಸತ್ಯ ಪ್ರಸಾದ್, ತಮ್ಮ ಸಂಪುಟ ಸಹೋದ್ಯೋಗಿ ಮತ್ತು ಆಂಧ್ರಪ್ರದೇಶ ಗೃಹ ಸಚಿವೆ ವಂಗಲಪುಡಿ ಅನಿತಾ, ದತ್ತಿ ಇಲಾಖೆ ಸಚಿವ ಅನಮ್ ರಾಮನಾರಾಯಣ ರೆಡ್ಡಿ , ನೀರಾವರಿ ಸಚಿವರಾದ ನಿಮ್ಮಲ ರಾಮ ನಾಯ್ಡು ಮತ್ತು ಕೆ. ಪಾರ್ಥಸಾರಥಿ (ಐ&ಪಿಆರ್) ಅವರೊಂದಿಗೆ SVIMS ಆಸ್ಪತ್ರೆಗೆ ಭೇಟಿ ನೀಡಿ ಸರ್ಕಾರದ ಪರವಾಗಿ ಈ ಘೋಷಣೆ ಮಾಡಿದರು.
ಗಾಯಾಳುಗಳು ಡಿಸ್ಡಾರ್ಜ್
ಇದೇ ವೇಳೆ ಬುಧವಾರ ಘಟನೆಯಲ್ಲಿ ಗಾಯಗೊಂಡಿದ್ದ 48 ಜನರಲ್ಲಿ 32 ಮಂದಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರು ದಾಖಲಾಗಿದ್ದ ಎಸ್‌ವಿಐಎಂ ಹಾಗೂ ಆರ್‌ಯುಐಎ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸಂತ್ರಸ್ಥರಿಗೆ ಸಕಲ ನೆರವು
ಘಟನೆ ಬೆನ್ನಲ್ಲೇ ಬುಧವಾರ ಸಿಎಂ ಚಂದ್ರಬಾಬು ನಾಯ್ಡು ಡಿಜಿಪಿ, ಟಿಟಿಡಿ ಕಾರ್ಯಕಾರಿ ಅಧಿಕಾರಿ, ತಿರುಪತಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು. ಅಲ್ಲದೆ ಗಾಯಾಳುಗಳ ಚಿಕಿತ್ಸೆ ಬಗ್ಗೆ ನಿಗಾ ವಹಿಸುವಂತೆ ಹಾಗೂ ಭಕ್ತರಿಗೆ ಅಗತ್ಯ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಖುದ್ದು ವ್ಯವಸ್ಥೆಯನ್ನು ಪರಿಶೀಲನೆ ನಡೆಸುವಂತೆಯೂ ಸೂಚಿಸಿದ್ದರು. ಕೆಲವು ಅಧಿಕಾರಿಗಳ ನಿರ್ಲಕ್ಷ್ಯವೇ ಕಾಲ್ತುಳಿತಕ್ಕೆ ಕಾರಣವಾಗಿದ್ದು, ಇಂತಹ ದುರ್ಘಟನೆ ಮರುಕಳಿಸದಂತೆ ಎಚ್ಚರ ವಹಿಸುವಂತೆಯೂ ಸೂಚಿಸಿದ್ದಾರೆ