ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ ಶ್ರೀಕೃಷ್ಣಮಠದಲ್ಲಿ ವಾರ್ಷಿಕ ಸಪ್ತೋತ್ಸವಕ್ಕೆ ಕ್ಷಣಗಣನೆ-ಜ.9ರಿ೦ದ 15ರವರೆಗೆ ಉತ್ಸವ
ಉಡುಪಿ:ಜ.8: ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜ. 9ರಿಂದ ಪ್ರಾರಂಭಗೊಂಡು 15ರವರೆಗೆ 7 ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಪುತ್ತಿಗೆ ಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಮಕರ ಸಂಕ್ರಮಣದ ಸಂದರ್ಭದಂದು ಸುಮಾರು 8 ಶತಮಾನಗಳ ಹಿಂದೆ ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಬಾಲ ಕೃಷ್ಣನ ಮೂರ್ತಿಯನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು ಎಂಬ ಪ್ರತೀತಿ ಇದ್ದು, ಅದರಂತೆ ಅಂದಿನಿಂದ ಒಂದು ವಾರ ಕಾಲ ಸಪ್ತೋತ್ಸವ ನಡೆಯುತ್ತಿದೆ.
ಈ ಬಾರಿಯ ಸಪ್ತೋತ್ಸವದಲ್ಲಿ ಭಾಗವಹಿಸಲು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಆಹ್ವಾನದಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಸಂಸದರಾಗಿರುವ ಜಾನ್ ಮುಲಾಯ್ ಆಗಮಿಸಲಿದ್ದಾರೆ. ಅಲ್ಲದೇ ಗೌಡೀಯ ಮಾಧ್ವ ಮಠದ ಮಹಾಸ್ವಾಮಿಗಳಾದ ಶ್ರೀಪುಂಡರೀಕ ಗೋಸ್ವಾಮಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಮಠದ ಪ್ರಕಟಣೆ ತಿಳಿಸಿದೆ.
ರಥಬೀದಿಯ ಸುತ್ತಲೂ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.