ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಇ೦ದ್ರಾಳಿ ರೈಲ್ವೇ ಬ್ರೀಜ್ ಶಾಶ್ವತ ಪರಿಹಾರಕ್ಕೆ ಮತ್ತಷ್ಟುದಿನ ಬೇಕೇಬೇಕು-ಬ್ರೀಜ್ ನಿರ್ಮಾಣದ ಬಳಿಕ ಮತ್ತಷ್ಟು ಸಮಸ್ಯೆಗೆ ನಾ೦ದಿಯಾಗುವುದರಲ್ಲಿ ಸ೦ಶಯವೇ ಇಲ್ಲ

ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹೃದಯ ಭಾಗವಾಗಿರುವ ಇ೦ದ್ರಾಳಿ ಮೇಲ್ಸೇತುವೆಯ ಬ್ರೀಜ್ ಕಾಮಗಾರಿಯು ಹಲವು ವರುಷಗಳ ಕಾಲ ಸ೦ದರೂ ಇದುವರೆಗೆ ಈ ಬ್ರೀಜ್ ನಿರ್ಮಾಣ ಕಾಮಗಾರಿಯ ಕೆಲಸವೂ ಆಮೆಗತಿಯಲ್ಲಿ ನಡೆಯುತ್ತಿರುವುದರಿ೦ದ ಹಲವು ಅಪಘಾತಗಳು ನಡೆದು ಹಲವಾರು ಮ೦ದಿ ಸಾವನ್ನಪ್ಪಲು ಕಾರಣವಾಗಿದೆ.ಮಾತ್ರವಲ್ಲದೇ ಪರಿಸರದಲ್ಲಿ ವಾಸಿಸುತ್ತಿರುವ ಜನರಿಗೂ ಇದರಿ೦ದಾಗಿ ಬಹಳ ತೊ೦ದರೆಯನ್ನು ಅನುಭವಿಸುವ೦ತಾಗಿದೆ.ಮಾತ್ರವಲ್ಲದೇ ನಗರಸಭೆಯ ಸಗ್ರಿವಾರ್ಡಿನಲ್ಲಿ ಬಹಳಷ್ಟು ಸಮಸ್ಯೆ ಸೃಷ್ಠಿಯಾಗಿದೆ.

ಇದೀಗ ಈ ಬ್ರೀಜ್ ನಿರ್ಮಾಣ ಕಾಮಗಾರಿಯು ವೇಗದಿ೦ದ ನಡೆಯುತ್ತಿದೆ ಅದರೂ ಪೂರ್ಣಗೊಳ್ಳಲು ಮತ್ತೆ ಒ೦ದು ತಿ೦ಗಳಕಾಲ ತಗಲುವುದರಲ್ಲಿ ಸ೦ಶಯವೇ ಇಲ್ಲ.ಈಗಾಗಲೇ ಬ್ರೀಜ್ ನ ಜೋಡಣೆ ಕಾಮಗಾರಿಯು ನಡೆಯುತ್ತಿದೆಯಾದರೂ ಜೋಡಣೆಯ ಕೆಲಸವು ಪೂರ್ಣಗೊಳ್ಳಲು ಮತ್ತೆ ಹಲವು ದಿನಗಳ ಕಾಲದ ಅಗತ್ಯವಿದೆ. ಅದಕಾರಣ 2025ರ ಜನವರಿ ತಿ೦ಗಳ ಅ೦ತ್ಯದಲ್ಲಿ ಬ್ರೀಜ್ ಪೂರ್ಣಗೊಳ್ಳ ಬಹುದೆ೦ದು ನಿರೀಕ್ಷೆಯಲ್ಲಿ ಜನರಿದ್ದಾರೆ.ಅದರೆ ಜಿಲ್ಲಾಡಳಿತವು ಈ ಕಾಮಗಾರಿ ಜನವರಿ ತಿ೦ಗಳ 10ಕ್ಕೆ ಪೂರ್ಣಗೊಳಿಸದೇ ಇದ್ದಲ್ಲಿ ಕಾಮಗಾರಿಯನ್ನು ನಡೆಸುವ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಲು ಮು೦ದಾಗಿರುವುದು ಮಾತ್ರ ಹಸ್ಯಾಸ್ಪದವಾಗಿದೆ.

ಈ ಮಾರ್ಗದಲ್ಲಿ ಅಪಘಾತಗಳ ಸ೦ಖ್ಯೆ ಹೆಚ್ಚುತ್ತಿರುವುದಕ್ಕೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪವನ್ನು ಹಾಕಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಬ್ರೀಜ್ ನಿರ್ಮಾಣದ ಬಳಿಕ ಮತ್ತಷ್ಟು ಅಪಘಾತ ಸಮಸ್ಯೆ ಉದ್ಬವವಾಗುವುದ೦ತೂ ಖ೦ಡಿತ ತಪ್ಪದು.ಏಕೆ೦ದರೆ ಉಡುಪಿಯಿ೦ದ ರೈಲ್ವೇ ನಿಲ್ದಾಣಕ್ಕೆ ಹೋಗುವುದು ಹೇಗೆ ಮತ್ತು ಪಕ್ಕದಲ್ಲಿರುವ ಶಾಲೆಯ ಮಕ್ಕಳು ಶಾಲೆಗೆ ಹೋಗಿಬರುವುದು ಹೇಗೆ ಎ೦ಬ ಬಹಳ ದೊಡ್ಡ ಸಮಸ್ಯೆಗೆ ನಾ೦ದಿಯಾಗುವುದರಲ್ಲಿ ಸ೦ಶಯವೇ ಇಲ್ಲ.

ಈಗಾಗಲೇ ಉಡುಪಿಯ ಸ೦ತೆಕಟ್ಟೆ,ಕರಾವಳಿ ಬೈಪಾಸು,ಅ೦ಬಲಪಾಡಿ ಜ೦ಕ್ಷನ್ ಬಳಿ ಫ್ಲಯಿಓವರ್ ಬ್ರೀಜ್ ಕಾಮಗಾರಿಯಿ೦ದಾಗಿ ಮತ್ತಷ್ಟು ಸಮಸ್ಯೆ ನಿರ್ಮಾಣವಾಗಿದೆ.ಮು೦ದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ದೊಡ್ಡಸಮಸ್ಯೆಯಾಗುವುದರಲ್ಲಿ ಸ೦ಶಯವೇ ಇಲ್ಲ.

kiniudupi@rediffmail.com

No Comments

Leave A Comment