ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಲಬುರಗಿ: ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ; ಮಾಜಿ ಕಾರ್ಪೊರೇಟರ್ ಸೇರಿ ಐವರ ವಿರುದ್ಧ FIR
ಕಲಬುರಗಿ: ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ ಸೇರಿ ಆರು ಮಂದಿ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಲಬುರಗಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ಅವರು ಕಪನೂರ ಮತ್ತು ಇತರ ಐವರು ತನಗೆ (ಪಾಟೀಲ) ಮತ್ತು ಇತರ ಮೂವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ
ಕಾಂಗ್ರೆಸ್ ಮುಖಂಡರಾದ ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಖನಾಥ ಸಜ್ಜನ್, ರೌಡಿಶೀಟರ್ ಪ್ರತಾಪ್ ಧೀರ ಪಾಟೀಲ (ಪಪ್ಪು ಪಾಟೀಲ), ಸೊಲ್ಲಾಪುರದ ಕಾರ್ಪೊರೇಟರ್ ಮನೋಜ್ ಸೆಜವಾಲ್ ಮತ್ತು ರಾಮನಗೌಡ ಪಾಟೀಲ ವಿರುದ್ಧ ಬಿಎನ್‌ಎಸ್ ಕಲಂ 351 (2) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಮಣಿಕಂಠ ರಾಠೋಡ ಹಾಗೂ ನನ್ನ ಕೊಲೆಗೆ ಆರು ಜನ ಆರೋಪಿಗಳು ಸುಪಾರಿ ನೀಡಿದ್ದಾರೆ ಎಂಬುದು ಬೀದರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಬರೆದಿಟ್ಟ ಮರಣ ಪತ್ರದಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಈ ಆರು ಜನರಿಂದ ನಮಗೆ ಜೀವ ಭಯವಿದೆ’ ಎಂದು ಆರೋಪಿಸಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ದೂರು ದಾಖಲಿಸಿದ್ದಾರೆ.
ಜೀವ ಬೆದರಿಕೆ ಸಂಬಂಧ ಬಿಜೆಪಿ ಮುಖಂಡರು ದೂರು ಕೊಡಲು ಶುಕ್ರವಾರ ರಾತ್ರಿ ಸ್ಟೇಷನ್ ಬಜಾರ್ ಠಾಣೆಗೆ ಹೋಗಿದ್ದರು. ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ ಅವರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು, ಪರಸ್ಪರ ವಾಗ್ವಾದವೂ ನಡೆದಿತ್ತು.
ಪೊಲೀಸರ ವಿಳಂಬ ನೀತಿಯನ್ನು ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ನಗರದ ಜಗತ್ ವೃತ್ತದಲ್ಲಿ 3 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಬಳಿಕ ನ್ಯಾಯಾಲಯದ ಮೊರೆ ಹೋಗಿ, ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾದರು.
ಗುರುವಾರ ಆತ್ಮಹತ್ಯೆ ಮಾಡಿಕೊಂಡ ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಲ್ ಅವರು ತಮ್ಮ ಡೆತ್ ನೋಟ್‌ನಲ್ಲಿ ಕಪನೂರ ಮತ್ತು ಅವರ ಬೆಂಬಲಿಗರು 1 ಕೋಟಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.