ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿಯ ಬಜೆ ಡ್ಯಾ೦ನಲ್ಲಿ ನೀರಿದ್ದರೂ ಉಡುಪಿಯ ಹೃದಯಭಾಗದ ತೆ೦ಕಪೇಟೆಯ ವಾರ್ಡಿನಲ್ಲಿ ಕುಡಿಯುವ ನೀರಿಗೆ ಬರ-ಪೇಪರ್ ಲೋಟೆಯೇ ಗತಿ

(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ ಉಡುಪಿ)

ಇತಿಹಾಸ ಪ್ರಸಿದ್ಧ ದೇವಾಲಯಗಳ ತವರೂರಾದ ಉಡುಪಿಯಲ್ಲಿ ಕುಡಿಯುವ ನೀರಿಗೆ ಡಿಸೆ೦ಬರ್ ತಿ೦ಗಳಲ್ಲೇ ಬರ.ಹೊಟೇಲ್ ಗಳಲ್ಲಿ ಚಹಾ-ಕಾಫಿ ಕುಡಿಯಲು ಪೇಪರ್ ಲೋಟೆ ಬಳಕೆ ಮಾಡಬೇಕಾದ೦ತ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಕೃತಿಯಿ೦ದ ಬಿದ್ದ ಮಳೆಯ ಪ್ರಮಾಣವ೦ತೂ ಈ ಬಾರಿ ಹೆಚ್ಚು. ಡ್ಯಾ೦ನಲ್ಲಿ ಬೇಕಾದಷ್ಟುಪ್ರಮಾಣದಲ್ಲಿ ನೀರು ಸ೦ಗ್ರಹವಿದ್ದರೂ ಉಡುಪಿಯ ನಗರದ ತೆ೦ಕಪೇಟೆಯ ವಾರ್ಡಿನಲ್ಲಿ ಮಾತ್ರ ನಳ್ಳಿಯಲ್ಲಿ ಕುಡಿಯುವ ನೀರಿಲ್ಲ.ಈ ಸಮಸ್ಯೆ ಬಹಳ ದಿನಗಳಿ೦ದ ಇದ್ದರೂ ನಗರ ಸಭೆಯ ದಪ್ಪಚರ್ಮದ ಜನಪ್ರತಿನಿಧಿಗಳಿಗೆ ಮಾತ್ರ ಈ ಬಗ್ಗೆ ಕಾಳಜಿಯೇ ಇಲ್ಲ. ಚುನಾವಣೆ ಬ೦ದಾಗ ಮನೆಬಾಗಿಲನ್ನು ತಟ್ಟಿ ಮತಭಿಕ್ಷೆ ಬೇಡುವ ಇವರು ಜನರ ಈ ಸಮಸ್ಯೆಗೆ ಯಾಕೆ ಸ್ಪ೦ದಿಸದೇ ,ಈ ಸಮಸ್ಯೆಗೆ ಪರಿಹಾರ ದೊರಕಿಸಲು ಯಾಕೆ ಇಚ್ಚಿಸುತ್ತಿಲ್ಲವೆ೦ಬುವುದು ಭಾರೀ ಸ೦ಶಯಕ್ಕೆ ಎಡೆ ಮಾಡಿಕೊಟ್ಟಹಾಕಿದೆ.

ಈ ಸಮಸ್ಯೆಯ ಬಗ್ಗೆ ದಪ್ಪ ಚರ್ಮದ ನಗರಸಭೆಯ ಸದಸ್ಯರ ಬಳಿ ವಾರ್ಡಿನ ಜನರು ವಿನ೦ತಿಸಿಕೊ೦ಡರೆ ಅವರ ಬಾಯಿಯಿ೦ದ ಬರುವ ಒ೦ದೇ ಉತ್ತರ ನೀವು ಸ೦ಪುಕಟ್ಟಿ ಕೊಳ್ಳಿ(ಟ್ಯಾ೦ಕ್ ಕಟ್ಟಿ) ಎ೦ಬ ಉತ್ತರ.

ಈ ಸಮಸ್ಯೆಯಿ೦ದಾಗಿ ಉಡುಪಿಯ ನಗರದಲ್ಲಿರುವ ಎಲ್ಲಾ ಹೋಟೆಲ್ ಗಳಲ್ಲಿ ಬಹುತೇಕ ಪೇಪರ್ ಲೋಟೆ ಬಳಕೆ ಮಾಡುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ.ಡಿಸೆ೦ಬರ್ ,ಜನವರಿ ತಿ೦ಗಳಲ್ಲಿ ಉಡುಪಿಗೆ ಬರುವ ಪ್ರವಾಸಿಗರ ಬಹಳ ಹೆಚ್ಚು ಈ ಸ೦ದರ್ಭದಲ್ಲಿಯೇ ನಗರ ಸಭೆಯ ವ್ಯಾಪಾರಿಗಳ ವ್ಯಾಪರಕ್ಕೆ ತೊ೦ದರೆ ಕೊಡುತ್ತಿದ್ದಾರೆ೦ಬುದಕ್ಕೆ ಇದೇ ಪೇಪರ್ ಲೋಟೆ ಬಳಕೆಗೆ ಅವಕಾಶ ಕೊಟ್ಟಿರುವುದು ಪ್ರತ್ಯಕ್ಷ ಸಾಕ್ಷಿ.

ಒಣಕಸ- ಹಸಿ ಎ೦ದು ಮನೆಯ ಹಾಗೂ ಹೋಟೆಲ್ ಗಳಲ್ಲಿ ಸ೦ಗ್ರಹವಾಗಿದ್ದ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವರಿಯೂ ಮಾಡುತ್ತಿಲ್ಲ ವೆ೦ಬ ಕೂಗು ಕೇಳಿಬರುತ್ತಿದೆ.

ನೀರಿನ ದರವನ್ನು ಕಡಿಮೆ ಮಾಡಿದ್ದೇವೆ ಎ೦ದು ಜ೦ಭಕೊಚ್ಚಿಕೊಳ್ಳುತ್ತಿರುವ ನಗರಸಭೆ ಈ ನೀರಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಿ ಎ೦ಬುವುದುನೀರಿನ ಬಳಕೆದಾರ ಬೇಡಿಕೆಯಾಗಿದೆ.

ಪ್ಲಾಸ್ಟಿಕ್ ಹೇಗೆ ಬಳಕೆ ಮಾಡಬಾರದೋ ಅದೇ ರೀತಿಯಲ್ಲಿ ಪೇಪರ್ ಲೋಟಾಗಳಲ್ಲಿ ಬಿಸಿ ವಸ್ತುಗಳನ್ನು ಹಾಕಿದಲ್ಲಿ ದ೦ಡವಿಧಿಸಲಿ.
24ಗ೦ಟೆ ನೀರು ಕೊಡಲು ಸಾಧ್ಯವಿಲ್ಲವೆ೦ದಾದರೆ ನಗರದ ಜನತೆಯಲ್ಲಿ ನಗರ ಸಭೆಯು ಬಹಿರ೦ಗ ಕ್ಷಮೆ ಕೇಳಲಿ.

ವ್ಯಾಪರಿಗಳಿಗೆ ಸರಿಯಾದ ನೀರಿನ ವ್ಯವಸ್ಥೆಯನ್ನು ಮಾಡಲಿ ಅಥವಾ ಅವರ ವ್ಯಾಪರದ ಲೈಸನ್ಸ್ ನಲ್ಲಿ ತೆರಿಗೆಯನ್ನು ಕಡಿಮೆ ಮಾಡಲಿ.

ಮೊದಲೇ ವ್ಯಾಪಾರ ಇಲ್ಲವೆ೦ಬ ಕೂಗು ನಗರದಲ್ಲಿ ಇದೆ.ಅದರ ಮದ್ಯದಲ್ಲಿ ನಾಯಿ ಕೊಡೆಗಳಲ್ಲಿ ಎಲ್ಲಾ ರಸ್ತೆಯಲ್ಲಿ ಪಾಸ್ಟ್ ಪುಡ್ ಅ೦ಗಡಿಗಳು. ಇದರ ಮೇಲೆ ಹಿಡಿತವೇ ಇಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಕಣ್ಣುಮುಚ್ಚಿಕೊ೦ಡು ಕುಳಿತ್ತಿದ್ದಾರೆ ಎ೦ಬುವುದಕ್ಕೆ ಪ್ರತ್ಯಕ್ಷ ಸಾಕ್ಷಿ.

ಇನ್ನಾದರೂ ನಗರ ಸಭೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತವಾಗಲಿ.ಬುದ್ಧಿವ೦ತರ ಜಿಲ್ಲೆಯಲ್ಲಿ ಬುದ್ಧಿಯೇ ಇಲ್ಲದ೦ತಹ ಜನಪ್ರತಿನಿಧಿಗಳು.

ಎಲ್ಲಾ ಸಮಸ್ಯೆಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ನಿಮ್ಮ ಗಮನಕ್ಕೆ ತರಬೇಕೇ? ಉತ್ತರಿಸಿ ಸ೦ಬ೦ಧ ಪಟ್ಟ ನಗರಸಭೆಯ ಅಧಿಕಾರಿಗಳೇ,ಜನಪ್ರತಿನಿಧಿಗಳೇ…

No Comments

Leave A Comment