ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ರಷ್ಯಾದಲ್ಲಿ 9/11 ಮಾದರಿಯ ದಾಳಿ, ಡ್ರೋನ್​ಗಳ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಉರುಳಿಸಿದ ಉಕ್ರೇನ್​

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿರಂತರವಾಗಿ ಹೆಚ್ಚುತ್ತಿದೆ. ಉಕ್ರೇನ್ ಸೇನೆಯು ರಷ್ಯಾದ ಕಜಾನ್ ನಗರದಲ್ಲಿ ಸ್ಫೋಟಕಗಳನ್ನು ತುಂಬಿದ ಡ್ರೋನ್‌ನೊಂದಿಗೆ ಭಾರಿ ದಾಳಿ ನಡೆಸಿದೆ. ಉಕ್ರೇನ್‌ನ 8 ಸ್ಫೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.

ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಎಲ್ಲಾ ಕೈಗಾರಿಕೆಗಳ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಸರ್ಕಾರ ಹೇಳುತ್ತದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಉಕ್ರೇನ್‌ನ ಡ್ರೋನ್ ದಾಳಿಯು ಟಾಟರ್ಸ್ತಾನ್ ಪ್ರಾಂತ್ಯದ ರಾಜಧಾನಿಯಲ್ಲಿ 3 ಕಟ್ಟಡಗಳನ್ನು ಹಾನಿಗೊಳಿಸಿದೆ. ಈ ದಾಳಿಯ ನಂತರ, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ. ಶುಕ್ರವಾರ ಮುಂಜಾನೆ, ರಷ್ಯಾ ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ಮಾಡಿತ್ತು, ಒಬ್ಬ ವ್ಯಕ್ತಿಯನ್ನು ಕೊಂದು ಒಂಬತ್ತು ಮಂದಿ ಗಾಯಗೊಂಡಿದ್ದರು. ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಉಕ್ರೇನ್ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಷ್ಯಾ ಹೇಳಿದೆ.

ಕೀವ್‌ನಲ್ಲಿ ಸೂರ್ಯೋದಯಕ್ಕೆ ಮುಂಚೆಯೇ ಕನಿಷ್ಠ ಮೂರು ಸ್ಫೋಟಗಳು ಕೇಳಿಬಂದವು. ಕ್ಷಿಪಣಿ ದಾಳಿಯು ಮೂರು ಜಿಲ್ಲೆಗಳಲ್ಲಿ ಹಾನಿ ಮತ್ತು ಬೆಂಕಿಯನ್ನು ಉಂಟುಮಾಡಿತು. ನಗರ ಪಾಲಿಕೆ ಈ ಮಾಹಿತಿ ನೀಡಿದೆ. ದಾಳಿಯಲ್ಲಿ 630 ವಸತಿ ಕಟ್ಟಡಗಳು, 16 ವೈದ್ಯಕೀಯ ಕೇಂದ್ರಗಳು ಮತ್ತು 30 ಶಾಲೆಗಳಿಗೆ ಹಾನಿಯಾಗಿದೆ ಎಂದು ಆಡಳಿತ ತಿಳಿಸಿದೆ.

ಎರಡು ದಿನಗಳ ಹಿಂದೆ ರೋಸ್ಟೋವ್ ಗಡಿ ಪ್ರದೇಶದ ಮೇಲೆ ಉಕ್ರೇನಿಯನ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಪ್ರಕಾರ, ಉಕ್ರೇನ್ ಯುಎಸ್ ನಿರ್ಮಿತ ಆರು ‘ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್’ ಕ್ಷಿಪಣಿಗಳನ್ನು ಮತ್ತು ನಾಲ್ಕು ಯುಕೆ ಮೂಲದ ಸ್ಟಾರ್ಮ್ ಶ್ಯಾಡೋ ಏರ್-ಲಾಂಚ್ಡ್ ಕ್ಷಿಪಣಿಗಳನ್ನು ದಾಳಿಯಲ್ಲಿ ಬಳಸಿದೆ.

kiniudupi@rediffmail.com

No Comments

Leave A Comment