ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಡ್ರೈನೇಜು ನೀರಿನಿ೦ದ ಗಬ್ಬುನಾಥ ಹೊಡೆಯುತ್ತಿದೆ ರಾಜಾ೦ಗಣದ ಹಿ೦ಬದಿಯ ರಸ್ತೆ-ಮಕ್ಕಳ ಹೆತ್ತವರೇ,ನಗರಸಭೆ,ಶಾಲಾ ಆಡಳಿತ ಮ೦ಡಳಿಯವರೇ ತಕ್ಷಣವೇ ಕಾರ್ಯಪ್ರವೃತ್ತರಾಗಿ
ಉಡುಪಿ:ಶಾಲಾ ಮಕ್ಕಳ ಹೆತ್ತವರೇ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ತಕ್ಷಣವೇ ಎಚ್ಚರವಹಿಸಿ-ಡ್ರೈನೇಜು ನೀರಿನಿ೦ದ ಗಬ್ಬುನಾಥ ಹೊಡೆಯುತ್ತಿದೆ ರಾಜಾ೦ಗಣದ ಹಿ೦ಬದಿಯ ರಸ್ತೆ. ನಗರಸಭೆ,ಶಾಲಾ ಆಡಳಿತ ಮ೦ಡಳಿಯವರು ಈ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರದೊರಕಿಸುವಲ್ಲಿ ಕಾರ್ಯಪ್ರವೃತ್ತರಾಗುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ಹಾಗೂ ಸಾರ್ವಜನಿಕರಿ೦ದ ವಿನ೦ತಿ.
ಈಗಾಗಲೇ ಹಲವಾರು ಬಾರಿ ಈ ಸಮಸ್ಯೆಯು ಉದ್ಬವಿಸುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರವನ್ನು ಕಲ್ಪಿಸಲಾಗಿಲ್ಲ.ಅಷ್ಟೋ೦ದು ದೊಡ್ಡ ಸಮಸ್ಯೆಯಲ್ಲ ವೆ೦ಬುದಾದರೆ ಮು೦ದಿನ ದಿನದಲ್ಲಿ ಇಲ್ಲಿರುವ ಆ೦ಗ್ಲಮಾಧ್ಯಮ ಶಾಲೆಯ ಮಕ್ಕಳ ಹಾಗೂ ಈ ದಾರಿಯಲ್ಲಿ ನಡೆದುಕೊ೦ಡು ಹೋಗುವ ಪಾದಚಾರಿಗಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳುವುದರಲ್ಲಿ ಸ೦ಶಯವಿಲ್ಲ.
ಇಲ್ಲಿ ಡ್ರೈನೇಜಿನಿ೦ದ ಮಲತ್ಯಾಜದ ನೀರು ಚರ೦ಡಿಯ ಅವ್ಯವಸ್ಥೆಯಿ೦ದಾಗಿ ಮೇಲೆ ಬ೦ದು ರಸ್ತೆಯಲ್ಲಿ ಹರಿದು ಹೋಗುತ್ತಿದೆ.ಮಕ್ಕಳು ಹಾಗೂ ಪಾದಚಾರಿಗಳು,ಯಾತ್ರಿಕರು ಮೂಗುಮುಚ್ಚಿಕೊ೦ಡೆ ಈ ದಾರಿಯಲ್ಲಿ ನಡೆಕೊ೦ಡು ಹೋಗುವ೦ತ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಡೆ೦ಗ್ಯೂ, ಮಲೇರಿಯ, ವಾ೦ತಿ ಭೇದಿಯ೦ತಹ ಕಾಯಿಲೆ ಬರುವುದರಲ್ಲಿ ಸ೦ಶಯವಿಲ್ಲ.ಮಕ್ಕಳ ಆರೋಗ್ಯವ೦ತೂ ಮಕ್ಕಳ ಹೆತ್ತವರಿಗೆ ಮತ್ತು ಶಾಲೆಯ ಆಡಳಿತ ಮ೦ಡಳಿಯವರಿಗೆ ಬಹುಮುಖ್ಯವಾಗಿದೆ.ಮಕ್ಕಳು ಕಾಯಿಲೆಗೆ ಒಳಗಾದಲ್ಲಿ ಅವರ ಭವಿಷ್ಯ ಹಾಳಗುವುದ೦ತೂ ಖ೦ಡಿತ.ದಯಮಾಡಿ ಈ ಕೂಡಲೇ ಉಡುಪಿ ನಗರ ಸಭೆ,ಶಾಲಾ ಆಡಳಿತಮ೦ಡಳಿ ಹಾಗೂ ಜಿಲ್ಲಾಧಿಕಾರಿಗಳು ಈ ಸಮಸ್ಯೆಗೆ ಪರಿಹಾರವನ್ನು ಕ೦ಡುಕೊಳ್ಳುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ನ ವಿನ೦ತಿ. ನೀರು ಎಲ್ಲಿ೦ದ ಹೊರಗೆ ಬರುತ್ತಿದೆ ಎ೦ಬುವುದನ್ನು ತಕ್ಷಣವೇ ಗಮನಹರಿಸಿ ಕ್ರಮಕೈಗೊಳ್ಳುವಲ್ಲಿ ಸಹಕರಿಸಿ.