ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ತೆಲಂಗಾಣದಲ್ಲಿ ಎನ್ಕೌಂಟರ್ – 7 ನಕ್ಸಲರು ಸಾವು
ಹೈದರಾಬಾದ್:ಡಿ.01 ,ಇಂದು ಬೆಳಿಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಉನ್ನತ ಕಮಾಂಡರ್ ಸೇರಿದಂತೆ ಏಳು ಮಾವೋವಾದಿಗಳು ಹತರಾಗಿದ್ದಾರೆ. ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯಲ್ಲಿ ಇಬ್ಬರು ಬುಡಕಟ್ಟು ಯುವಕರನ್ನು ಹತ್ಯೆಗೈದ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಗ್ರೇಹೌಂಡ್ಸ್ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಮಾವೋವಾದಿ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿತ್ತು. ಆದಾಗ್ಯೂ, ಅವರು ಕಮಾಂಡೋಗಳತ್ತ ಗುಂಡು ಹಾರಿಸಿದರು, ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ್ದು ಏಳು ಮಾವೋವಾದಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಹತ್ಯೆಯಾದವರಲ್ಲಿ ಸಿಪಿಐ (ಮಾವೋವಾದಿ) ಯೆಲ್ಲಾಂಡು-ನರ್ಸಂಪೇಟ್ ಪ್ರದೇಶ ಸಮಿತಿಯ ಕಮಾಂಡರ್ ಮತ್ತು ಅದರ ತೆಲಂಗಾಣ ರಾಜ್ಯ ಸಮಿತಿಯ ಸದಸ್ಯ ಭದ್ರು ಅಲಿಯಾಸ್ ಕುರ್ಸಂ ಮಂಗು ಅಲಿಯಾಸ್ ಪಾಪಣ್ಣ (35) ಎಂದು ಗರುತಿಸಲಾಗಿದೆ.
ಎನ್‌ಕೌಂಟರ್‌ನಲ್ಲಿ ಹತರಾದ ಇತರ ಆರು ಮಾವೋವಾದಿಗಳನ್ನು ಭದ್ರು ನೇತೃತ್ವದ ಏಗೊಲಾಪು ಮಲ್ಲಯ್ಯ(43), ಮುಸ್ಸಕಿ ದೇವಲ್(22), ಮುಸ್ಸಕಿ ಜಮುನಾ(23), ಜೈ ಸಿಂಗ್(25), ಕಿಶೋರ್(22), ಮತ್ತು ಕಾಮೇಶ್(23) ಎಂದು ಗುರುತಿಸಲಾಗಿದೆ.