ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಾಯಣಿ ನದಿ ಸೇತುವೆಯೊಂದು ಭಾನುವಾರ ಕುಸಿದು ಬಿದಿದ್ದು, ನಾಲ್ವರು ಪ್ರವಾಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ......

ತೆಲಂಗಾಣದಲ್ಲಿ ಎನ್​ಕೌಂಟರ್​ – 7 ನಕ್ಸಲರು ಸಾವು

ಹೈದರಾಬಾದ್:ಡಿ.01 ,ಇಂದು ಬೆಳಿಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಉನ್ನತ ಕಮಾಂಡರ್ ಸೇರಿದಂತೆ ಏಳು ಮಾವೋವಾದಿಗಳು ಹತರಾಗಿದ್ದಾರೆ. ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯಲ್ಲಿ ಇಬ್ಬರು ಬುಡಕಟ್ಟು ಯುವಕರನ್ನು ಹತ್ಯೆಗೈದ ಒಂದು ವಾರದ ನಂತರ ಈ ಘಟನೆ ನಡೆದಿದೆ.

ಗ್ರೇಹೌಂಡ್ಸ್ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಮಾವೋವಾದಿ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿತ್ತು. ಆದಾಗ್ಯೂ, ಅವರು ಕಮಾಂಡೋಗಳತ್ತ ಗುಂಡು ಹಾರಿಸಿದರು, ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ್ದು ಏಳು ಮಾವೋವಾದಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಹತ್ಯೆಯಾದವರಲ್ಲಿ ಸಿಪಿಐ (ಮಾವೋವಾದಿ) ಯೆಲ್ಲಾಂಡು-ನರ್ಸಂಪೇಟ್ ಪ್ರದೇಶ ಸಮಿತಿಯ ಕಮಾಂಡರ್ ಮತ್ತು ಅದರ ತೆಲಂಗಾಣ ರಾಜ್ಯ ಸಮಿತಿಯ ಸದಸ್ಯ ಭದ್ರು ಅಲಿಯಾಸ್ ಕುರ್ಸಂ ಮಂಗು ಅಲಿಯಾಸ್ ಪಾಪಣ್ಣ (35) ಎಂದು ಗರುತಿಸಲಾಗಿದೆ.

ಎನ್‌ಕೌಂಟರ್‌ನಲ್ಲಿ ಹತರಾದ ಇತರ ಆರು ಮಾವೋವಾದಿಗಳನ್ನು ಭದ್ರು ನೇತೃತ್ವದ ಏಗೊಲಾಪು ಮಲ್ಲಯ್ಯ(43), ಮುಸ್ಸಕಿ ದೇವಲ್(22), ಮುಸ್ಸಕಿ ಜಮುನಾ(23), ಜೈ ಸಿಂಗ್(25), ಕಿಶೋರ್(22), ಮತ್ತು ಕಾಮೇಶ್(23) ಎಂದು ಗುರುತಿಸಲಾಗಿದೆ.

kiniudupi@rediffmail.com

No Comments

Leave A Comment