ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಬೆಂಗಳೂರು, ನವೆಂಬರ್ 28: ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಸ್ಫೋಟಕ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್ ಅನ್ನು ಬಂಧಿಸಿರುವುದಾಗಿ ಸಿಬಿಐ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ಸಿಬಿಐನ ಜಾಗತಿಕ ಕಾರ್ಯಾಚರಣೆ ಘಟಕ ಮತ್ತು ಎನ್ಐಎ ಸಂಘಟಿತ ಪ್ರಯತ್ನದಿಂದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಒದಗಿಸಿದ್ದ. ಸ್ಫೋಟಕಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಲ್ಮಾನ್ ರೆಹಮಾನ್ ಖಾನ್ ನಿರತನಾಗಿದ್ದ.
ಸಲ್ಮಾನ್ ರೆಹಮಾನ್ ಖಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆತನಿಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬ್ರೈನ್ ವಾಶ್ ಮಾಡಿದ್ದ ನಾಸೀರ್, ರೆಹಮಾನ್ನನ್ನು ಭಯೋತ್ಪಾದನೆಯೆಡೆಗೆ ಸೆಳೆದಿದ್ದ.
ರೆಹಮಾನ್ ಶಿಕ್ಷೆ ಮುಗಿಸಿ ಹೊರಬಂದ ಬಳಿಕ ಉಗ್ರ ಚಟುವಟಿಗೆಳಿಗೆ ಸಹಾಯ ಮಾಡುತ್ತಿದ್ದ. ಟಿ.ನಾಸೀರ್ ಅಣತಿಯಂತೆ ಸಹಚರರ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳನ್ನು ಸಂಘಟಿಸಲು ತೊಡಗಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ರೆಹಮಾನ್ ಖಾನ್ ಪರಾರಿಯಾಗಿದ್ದ.
ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್ಐಎ ಅಧಿಕಾರಿಗಳು ಸಿಬಿಐಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ರವಾಂಡದಲ್ಲಿ ಉಗ್ರ ಸಲ್ಮಾನ್ ರೆಹಮಾನ್ ಬಂಧಿಸಿ ಇದೀಗ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.