ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಉಡುಪಿ ನ್ಯಾಯಾಧೀಶರುಗಳಾಗಿ ನೇಮಕಗೊಂಡ ಹಾಗೂ ಸಹಾಯಕ ಸರಕಾರಿ ಅಭಿಯೋಜಕರು,ಸರಕಾರಿ ಅಭಿಯೋಜಕರಿಗೆ ಸನ್ಮಾನ

ಉಡುಪಿ:ನ್ಯಾಯಾಧೀಶರುಗಳಾಗಿ ನೇಮಕಗೊಂಡು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಾದ ಶ್ರೀ ಶುಕ್ಲಾಕ್ಷ ಪಾಲನ್, ಶ್ರೀಮತಿ ಪಂಚಾಕ್ಷರಿ, ಶ್ರೀ ಕಿರಣ್ ಕಿಣಿ, ಶ್ರೀ ಕೃಷ್ಣಪ್ರಸಾದ್ , ಶ್ರೀ ಶ್ರೀಧರ ಭಟ್ , ಶ್ರೀ ಎಲ್.ಎನ್. ಭಟ್ , ಶ್ರೀಮತಿ ಭಾಮಿನಿ, ಶ್ರೀಮತಿ ಸುಜಾತಾ ಸುವರ್ಣ, ಶ್ರೀಮತಿ ಅರುಣಾ ಕುಮಾರಿ, ಶ್ರೀ ಪ್ರಶಾಂತ್ ಗಣಪತಿ, ಶ್ರೀ ಮಧುಕರ ಭಾಗವತ್, ಶ್ರೀ ಶ್ರೀಕಂಠ ಹೆಬ್ಬಾರ್, ಕು. ಲತಾ, ಶ್ರೀಮತಿ ಯಶಸ್ವಿನಿ ಅಮೀನ್ ಮತ್ತು ಶ್ರೀಮತಿ ವರ್ಷಶ್ರೀ, ಹೀಗೆ 15 ಮಂದಿ ನ್ಯಾಯಾಧೀಶರನ್ನು ನವೆಂಬರ್ ತಾ. 17ರಂದು ನಡೆದ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿ ಸಲಾಯಿತು.

ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಸರಕಾರಿ ಅಭಿಯೋಜಕರಾಗಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಾದ ಶ್ರೀ ಹರಿಶ್ಚಂದ್ರ ಉದಿಯಾವರ್, ಶ್ರೀ ನಾರಾಯಣ ಶೇರಿಗಾರ್, ಶ್ರೀ ಬದರಿನಾಥ್ ನಾಯರಿ, ಕು. ಸೀತಾ ಮತ್ತು ಶ್ರೀಮತಿ ಅಶ್ವಿತಾ ಅಮೀನ್ ಇವರನ್ನು ನವೆಂಬರ್ ತಾ. 17ರಂದು ನಡೆದ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿ ಸಲಾಯಿತು.

No Comments

Leave A Comment