ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ದಾವೂದ್ ಜೊತೆಗಿನ ನಂಟಿನಿಂದ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದ ನಟಿ
1995 ರಲ್ಲಿ ಬಿಡುಗಡೆಯಾದ ‘ಕರಣ್ ಅರ್ಜುನ್’ ಚಿತ್ರ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ 2025ಕ್ಕೆ ‘ಕರಣ್ ಅರ್ಜುನ್’ ಸಿನಿಮಾ 30 ವರ್ಷ ಪೂರೈಸುತ್ತಿದೆ. ಹೀಗಾಗಿ ಮತ್ತೆ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ. ಅಂದಿನ ಕಾಲದಲ್ಲಿ ಮೊದಲ ವಾರದಲ್ಲಿ ಚಿತ್ರ ಸುಮಾರು 1 ಕೋಟಿ ಕಲೆಕ್ಷನ್ ಮಾಡಿತ್ತು. ಮತ್ತೊಂದೆಡೆ ಚಿತ್ರದ ನಿರ್ದೇಶಕ ರಾಕೇಶ್ ರೋಷನ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಟಿ ಮಮತಾ ಕುಲಕರ್ಣಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಈಗ ನಟಿ ಎಲ್ಲಿ ಮತ್ತು ಹೇಗೆ ವಾಸಿಸುತ್ತಾರೆ ಎಂದು ಯಾರಿಗೂ ತಿಳಿದಿಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಕೇಶ್ ರೋಷನ್ ಮಮತಾ ಕುಲಕರ್ಣಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದರು. ಸಂದರ್ಶನದಲ್ಲಿ ರಾಕೇಶ್ ರೋಷನ್ ಅವರಿಗೆ ನಟಿಯ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಕುರಿತು ಮಾತನಾಡಿದ ಅವರು, ‘ಹಲವು ವರ್ಷಗಳಿಂದ ಮಮತಾ ಕುಲಕರ್ಣಿ ಜತೆ ಸಂಪರ್ಕದಲ್ಲಿಲ್ಲ. ಅವರು ಎಲ್ಲಿದ್ದಾರೆ ಅಂತ ಗೊತ್ತಿಲ್ಲ’ ಎಂದು ರಾಕೇಶ್ ರೋಷನ್ ಹೇಳಿದ್ದರು.
ದಿವಂಗತ ನಟ ಅಮರೀಶ್ ಪುರಿ ಬಗ್ಗೆ ರಾಕೇಶ್ ರೋಷನ್ ಕೂಡ ಹೇಳಿಕೆ ನೀಡಿದ್ದರು . ‘ಇಂದು ಅಮರೀಶ್ ಪುರಿ ಇದ್ದಿದ್ದರೆ ತುಂಬಾ ಖುಷಿಯಾಗುತ್ತಿತ್ತು. ಅಮರೀಶ್ ಪುರಿ ಮಾಡಿದಂತಹ ಪಾತ್ರಗಳನ್ನು ಯಾರೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಅಮರೀಶ್ ಪುರಿ ಅವರನ್ನು ಹೊಗಳಿದ್ದರು.
ಮಮತಾ ಕುಲಕರ್ಣಿ ಕುರಿತು ಮಾತನಾಡುತ್ತಾ, 22 ವರ್ಷಗಳ ಹಿಂದೆ ನಟಿ ಬಣ್ಣದ ಲೋಕಕ್ಕೆ ವಿದಾಯ ಹೇಳಿದರು. 2002ರಲ್ಲಿ ತೆರೆಕಂಡ ‘ಕಭಿ ತುಮ್ ಕಭಿ ಹಮ್’ ಚಿತ್ರದ ನಂತರ ಈ ನಟಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಖ್ಯಾತ ನಟಿಯರ ಪಟ್ಟಿಯಲ್ಲಿ ಮಮತಾ ಅಗ್ರಸ್ಥಾನದಲ್ಲಿದ್ದ ಕಾಲವೊಂದಿತ್ತು. ಅಂಡರ್ವರ್ಡ್ ಡಾನ್ ದಾವೂದ್ ಜೊತೆಗಿನ ಸಂಬಂಧವು ನಟಿಯ ಇಡೀ ಜೀವನವನ್ನು ಹಾಳುಮಾಡಿತು.
ಮಮತಾ ಕುಲಕರ್ಣಿ ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟಿ ‘ಆಶಿಕ್ ಆವಾರಾ’, ‘ಕ್ರಾಂತಿವೀರ್’, ‘ವಕ್ತ್ ಹಮಾರಾ ಹೈ’, ‘ಕರಣ್ ಅರ್ಜುನ್’ ಮತ್ತು ‘ಚೈನಾ ಗೇಟ್’ ಚಿತ್ರಗಳಲ್ಲಿ ಕಾಣಿಸಿಕೊಂಡರು. ವರದಿಗಳ ಪ್ರಕಾರ, 2014 ರಲ್ಲಿ ಮಮತಾ ಅವರು ಉದ್ಯಮವನ್ನು ತೊರೆದು ಆಧ್ಯಾತ್ಮಿಕತೆಯ ಹಾದಿ ಹಿಡಿದಿರುವುದಾಗಿ ವರದಿ ಆಗಿತ್ತು.