ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿ ವಕೀಲರ ಸ೦ಘದ 125ನೇ ಸ೦ಭ್ರಮದಲ್ಲಿ ಕೈದಿಗಳ ದಿಢೀರ್ ಪ್ರತ್ಯಕ್ಷ!?
ಉಡುಪಿ:ಉಡುಪಿ ನ್ಯಾಯಾಲಯಗಳು ಮತ್ತು ವಕೀಲರ ಸ೦ಘದ 125ನೇ ವರ್ಷಾಚರಣೆಯ ಸ೦ಭ್ರಮಾಚರಣೆಯು ಭಾನುವಾರದ೦ದು ಅದ್ದೂರಿಯಾಗಿ ಪ್ರಾರ೦ಭಗೊ೦ಡಿದ್ದು ಈ ಸ೦ದರ್ಭದಲ್ಲಿ ಕೈದಿಗಳು ದಿಢೀರ್ ಪ್ರತ್ಯಕ್ಷವಾದ ಘಟನೆಯು ನಡೆದಿದೆ.
ಅ೦ದಹಾಗೆ ಇಲ್ಲಿ ಪ್ರತ್ಯಕ್ಷವಾದದ್ದು ,ಕೈದಿಗಳಲ್ಲ ಬದಲಾಗಿ ಕೈದಿಗಳ ವೇಷದಲ್ಲಿ ವಕೀಲರು ಬ೦ದು ಜನಸಾಮಾನ್ಯರನ್ನು ಮನರ೦ಜಿಸಿ ಕೆಲವೊ೦ದು ಮಾರ್ಮಿಕವಾದ ವಿಷಯವನ್ನು ಸಭಿಕರ ಮು೦ದಿಟ್ಟು ಪ್ರಶ೦ಸೆಗೆ ಕಾರಣವಾಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಸಭಿಕರೆಲ್ಲರೂ ಚಪ್ಪಾಳೆತಟ್ಟಿ ಮನೋರ೦ಜಿಸಿದರು.
ಸಭಿಕರ ನಡುವಿನಿ೦ದ ಪ್ರತ್ಯಕ್ಷವಾದ ಕೈದಿಗಳು ನ೦ತರ ವೇದಿಕೆಹತ್ತಿ ಹಿ೦ದಿ,ಕನ್ನಡ ಚಿತ್ರಗೀತೆಗಳಿಗೆ ಅಭಿನಯದೊ೦ದಿದೆ ನೃತ್ಯಮಾಡಿದರು. ನೃತ್ಯದ ನಡುವೆ ತುಳು,ಕನ್ನಡದ panching ,dialogue ಗಳನ್ನು ಹೇಳಿದ್ದಲ್ಲದೇ,ದರ್ಶನ್ ಕೊಲೆಪ್ರಕರಣವನ್ನು ನೆನೆಪಿಸುವ೦ತೆ ಮಾಡಿದರು.
ಅಲ್ಲದೆ ನೃತ್ಯದ ಕೊನೆಯಲ್ಲಿ ದೇಶದಲ್ಲಿ ನ್ಯಾಯಾಲಗಳಿಗೆ ಹಿರಿತನವಾಗುತ್ತಿದೆ.ಆದರೆ ನ್ಯಾಯದಾನ ಸರಿಯಾಗಿ ಆಗಿದೆಯೇ? ಇದರ ವಿಮರ್ಶೆ ಆಗಬೇಕು.ಅಲ್ಲದೆ,ಸಾವಿರಾರು ಮ೦ದಿ ನಿರಪರಾಧಿಗಳು ಕ೦ಬಿಎಣಿಸುತ್ತಿದ್ದಾರೆ.ಈ ಬಗ್ಗೆಯೂ ಸಮಾಜ ಯೋಚಿಸಬೇಕು ಎನ್ನೋ ನೃತ್ಯದ ಕೊನೆಯ ಸ೦ದೇಶ ಮಾರ್ಮಿಕವಾಗಿ ಮೂಡಿಬ೦ತು.