ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

2024ರ ವಿಶ್ವ ಸುಂದರಿ ಕಿರೀಟ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಮುಡಿಗೆ

ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಅವರು 73 ನೇ ವಿಶ್ವ ಸುಂದರಿ 2024 ರ ವಿಜೇತರಾಗಿದ್ದಾರೆ. ಡೆನ್ಮಾರ್ಕ್‌ಗೆ ಮೊದಲ ವಿಶ್ವ ಸುಂದರಿ ಕಿರೀಟ ಇದು. ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮತ್ತು ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತದ ರಿಯಾ ಸಿಂಘಾ ಅಂತಿಮ ಸುತ್ತಿಗೆ ತಲುಪುವಲ್ಲಿ ವಿಫಲರಾದರು.

ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್ ಮೊದಲ ಬಾರಿಗೆ ಕಿರೀಟವನ್ನು ಪಡೆದುಕೊಳ್ಳುವ ಮೂಲಕ ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಡೆನ್ಮಾರ್ಕ್ ನ 21 ವರ್ಷದ ವಿಕ್ಟೋರಿಯಾ ಕ್ಜೇರ್ ವಿಜೇತರಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಮೊದಲ ರನ್ನರ್ ಅಪ್ ಆಗಿ, ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ 130 ಸುಂದರಿಯರು ಸ್ಪರ್ಧಿಸಿದ್ದರು. ತೀರ್ಪುಗಾರರ ಸಮಿತಿಯು ಫ್ಯಾಷನ್, ಮನರಂಜನೆ, ಕಲೆ ಮತ್ತು ಲೋಕೋಪಕಾರಿ ಉದ್ಯಮಗಳಿಂದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಜನರನ್ನು ಒಳಗೊಂಡಿತ್ತು. ಅವರಲ್ಲಿ ಎಮಿಲಿಯೊ ಎಸ್ಟೆಫಾನ್, ಮೈಕೆಲ್ ಸಿಂಕೊ, ಇವಾ ಕವಾಲ್ಲಿ, ಜೆಸ್ಸಿಕಾ ಕ್ಯಾರಿಲ್ಲೊ, ಜಿಯಾನ್ಲುಕಾ ವಾಚಿ, ನೋವಾ ಸ್ಟೀವನ್ಸ್, ಫರೀನಾ, ಗ್ಯಾರಿ ನಾಡರ್, ಗೇಬ್ರಿಯೆಲಾ ಗೊನ್ಜಾಲೆಜ್ ಮತ್ತು ಕ್ಯಾಮಿಲಾ ಗೈರಿಬಿಟೆ ಮೊದಲಾದವರಿದ್ದರು.

No Comments

Leave A Comment