ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ : ಹೆತ್ತವರ ಪ್ರೋತ್ಸಾಹದಿಂದ ಪ್ರತಿಭೆಗಳ ಅನಾವರಣ – ಸಂದೀಪ್ ಕುಮಾರ್
ಉಡುಪಿ : ಗ್ರಾಮೀಣ ಪ್ರತಿಭೆಗೆಗಳು ಬೆಳಕಿಗೆ ಬರಬೇಕಾದರೆ ಅವಕಾಶ ಮತ್ತು ವೇದಿಕೆ ಅಗತ್ಯ. ಹೆತ್ತವರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತವಾದ ತರಬೇತಿಯನ್ನು ನೀಡಿ ಅವರಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದು ನೈಸ್ ಕಂಪ್ಯೂಟರ್ ಎಜುಕೇಶನ್ ಇದರ ಆಡಳಿತ ನಿರ್ದೇಶಕ ಸಂದೀಪ್ ಕುಮಾರ್ ಹೇಳಿದರು.
ಅವರು ಉಡುಪಿ ನೈಸ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ನಲ್ಲಿ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ವಾಯ್ಸ್ ಆಪ್ ಚಾಣಕ್ಯ 2024 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 7ರ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭ ಉದ್ಘಾಟಿಸಿದ ಭಾರತದ ಮಾನವ ಹಕ್ಕುಗಳ ಮಂಡಳಿಯ ಕರ್ನಾಟಕ ರಾಜ್ಯಾಧ್ಯಕ್ಷ ಪ್ರಸಾದ್ ರೈ ಮಾತನಾಡಿ ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿರುವ ಚಾಣಕ್ಯ ಸಂಸ್ಥೆ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭೆಗಳ ಅನಾವರಣ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮಹಾಗಣಪತಿ ಸೌಹಾರ್ದ ಸಹಕಾರಿ ಸೇವಾ ಸಂಘ ಉಡುಪಿ ಇದರ ಉಪಾಧ್ಯಕ್ಷ ಸುನೀಲ್ ಕುಮಾರ್
, ನ್ಯಾಚುರಲ್ ಹರ್ಬ್ಸ್ ಪ್ರೈವೇಟ್ ಲಿ ಇದರ ಆಡಳಿತ ನಿರ್ದೇಶಕ ವಿಶ್ವನಾಥ್ ಶೆಟ್ಟಿ, ನಿರ್ದೇಶಕರಾದ
ದೀಪಕ್ ಪಾಟೀಲ್, ಗಣೇಶ್ ಕುಂದರ್, ಕೃಷ್ಣ ಪೂಜಾರಿ, ಸಂಗೀತ ನಿರ್ದೇಶಕ ರಮೇಶ್ ಡಿ ಚಾಂತರು, ಸಂಗೀತ ಗುರು ಸ್ಮಿತಾ ಭಟ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.
ನಿತ್ಯಾನಂದ ಭಟ್, ಸುಬ್ರಮಣ್ಯ ಕಂಗಿನಾಯ, ಪ್ರಸನ್ನ ಮುನಿಯಾಲು, ಶ್ವೇತಾ ಶೆಟ್ಟಿ,ಶರತ್, ವೃಂದ ಸಹಕರಿಸಿದರು.
ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ದೀಪಿಕಾ ಶೆಟ್ಟಿ ಚಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಡುಪಿ,ದಕ್ಷಿಣ ಕನ್ನಡ,ಕಾಸರಗೋಡು,ಉತ್ತರ ಕನ್ನಡ, ಶಿವಮೊಗ್ಗ ಸೆರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.