ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಚೆನ್ನೈ: ವಿಮಾನ ನಿಲ್ದಾಣದಲ್ಲಿ19 ಕೆಜಿ ಚಿನ್ನ ವಶ; ಸಿಂಗಾಪುರದಿಂದ ಬಂದಿಳಿದ 25 ಪ್ರಯಾಣಿಕರ ಬಂಧನ

ಚೆನ್ನೈ: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಿಂಗಾಪುರದಿಂದ ಬಂದಿಳಿದ 25 ಪ್ರಯಾಣಿಕರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ರೂ. 15 ಕೋಟಿ ಮೌಲ್ಯದ 19.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಗುಪ್ತಚರ ಮಾಹಿತಿ ಆಧಾರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಸ್ಕೂಟ್ ಏರ್‌ಲೈನ್ಸ್ (TR 578) ಏರ್ ಇಂಡಿಯಾ (IX 687) ಮತ್ತು ಇಂಡಿಗೋ (6E-1004) ವಿಮಾನಗಳಲ್ಲಿ ಬಂದಿಳಿದ ಎಲ್ಲಾ ಪ್ರಯಾಣಿಕರು ಒಂದೇ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದ್ದು, ಎಲ್ಲಾ 25 ಪ್ರಯಾಣಿಕರನ್ನು ಬಂಧಿಸಲಾಗಿದೆ.

ವಶಕ್ಕೆ ಪಡೆದ ಚಿನ್ನವು ಕಚ್ಚಾ 24 ಕ್ಯಾರೆಟ್ ಚಿನ್ನದ ಸರಗಳ ರೂಪದಲ್ಲಿದೆ (ಒಟ್ಟು 42) ಇವುಗಳನ್ನು ಒಳ ಉಡುಪುಗಳಲ್ಲಿ ಮರೆಮಾಡಲಾಗಿರುವ ಪ್ಲಾಸ್ಟಿಕ್ ಪ್ಯಾಕೇಜ್‌ಗಳಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಯಾಣಿಕರು ಸಾಗಿಸುತ್ತಿದ್ದ ಚಿನ್ನದ ಪ್ರಮಾಣ 600 ಗ್ರಾಂನಿಂದ 1.2 ಕೆಜಿ ವರೆಗೆ ಇತ್ತು. ಅವರಲ್ಲಿ ಹೆಚ್ಚಿನವರು ಸುಮಾರು 800 ಗ್ರಾಂ ತೂಕದ ಸರ ಹೊಂದಿದ್ದರು. ಸಾಮಾನ್ಯವಾಗಿ ಲೋಹದ ಡಿಟೆಕ್ಟರ್‌ಗಳಿಂದ ಚಿನ್ನವನ್ನು ಪತ್ತೆ ಮಾಡಲಾಗುತ್ತದೆ. ಆದರೆ, ಅದು ಆಗಿಲ್ಲ ಎಂದು ಡಿಆರ್ ಐ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ, ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪಾರ್ಸೆಲ್ ನೀಡಲಾಗಿದೆ ಮತ್ತು ಅದನ್ನು ಚೆನ್ನೈಗೆ ಸಾಗಿಸಲು ಹಣ ಪಾವತಿಸಲಾಗಿದೆ ಎಂದು ಅವರೆಲ್ಲರೂ ಒಂದೇ ರೀತಿಯ ಉತ್ತರ ನೀಡಿದ್ದಾರೆ.

No Comments

Leave A Comment