ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ತಂದೆ : ಸಾರ್ವಜನಿಕರಿಂದ ರಕ್ಷಣೆ
ಮಂಗಳೂರು: ನಗರದಲ್ಲಿ ತಂದೆ ಯೋರ್ವರು ತನ್ನ ಪುಟ್ಟ ಮಗುವಿನೊಂದಿಗೆ ಗುರುಪುರ ನದಿಗೆ ಹಾರಾಲು ಯತ್ನಿಸಿದ ಘಟನೆ ಸಂಭವಿಸಿದೆ.
ಪ್ರತಿನಿತ್ಯ ಗಲಾಟೆ, ಮಾನಸಿಕ ಹಿಂಸೆ ತಾಳಲಾರದೇ ಪುಟ್ಟ ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಗುರುಪುರಕ್ಕೆ ಯುವಕನೊಬ್ಬ ಬಂದಿದ್ದಾನೆ. ಜನ ಸಂಚಾರ ಇಲ್ಲದ ಸಂದರ್ಭ ಪುಟ್ಟ ಮಗುವನ್ನು ಎತ್ತಿಕೊಂಡು ಸೇತುವೆಯ ಮೇಲೇರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಪ್ರಶ್ನಿಸುತ್ತಾ ಬೇರೆಡೆ ಗಮನ ಹೋಗುವಂತೆ ಮಾಡಿದ್ಜಾರೆ.
ಸ್ಥಳೀಯರ ಪ್ರಶ್ನೆಗಳಿಗೆ ಪುಟಾಣಿಯ ಹಿಡಿದುಕೊಂಡು ಸೇತುವೆ ಮೇಲಿದ್ದ ಯುವಕ ಉತ್ತರಿಸುತ್ತಲೇ ನದಿಗೆ ಹಾರಲು ಮುಂದಾಗಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಮುಸ್ಲಿಂ ಬಾಂಧವರು ಮಗು ಮತ್ತು ಆತನನ್ನು ಹಿಡಿದು ಎರಡು ಜೀವಗಳ ರಕ್ಷಿಸಿದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.