ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ನ.13ರಿ೦ದ 15ರವರೆಗೆ ದೀಪೋತ್ಸವ

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿವಾಡಿಕೆಯ೦ತೆ ನಡೆಯುವ ಲಕ್ಷದೀಪೋತ್ಸವವು ಈ ಬಾರಿ ಉತ್ಥಾನದ್ವಾದಶಿಯ ದಿನವಾದ ನವೆ೦ಬರ್ 13ರಿ೦ದ15ರವರೆಗೆ ಜರಗಲಿದೆ.ಪರ್ಯಾಯ ಶ್ರೀಪುತ್ತಿಗೆ ಮಠದ ಉಭಯಶ್ರೀಗಳ ಉಸ್ತುವಾರಿಯಲ್ಲಿ ಈ ಬಾರಿಯ ಲಕ್ಷದೀಪೋತ್ಸವವು ನಡೆಯಲಿದ್ದು ಲಕ್ಷದೀಪೋತ್ಸವಕ್ಕೆ ಹಣತೆಯನ್ನು ಇಡಲು ಬೇಕಾಗುವ ಅಟ್ಟಳಿಗೆಯನ್ನು ನಿರ್ಮಿಸುವ ಕೆಲಸವು ಅತೀವೇಗದಿ೦ದ ಜರಗುತ್ತಿದೆ.ರಥಬೀದಿಯ ಸುತ್ತಲೂ ಗುಜ್ಜಿಯನ್ನು ಊರಲಾಗಿದೆ.

ಅದೇ ರೀತಿಯಲ್ಲಿ ಉತ್ಸವಕ್ಕೆ ಬೇಕಾಗುವ ರಥದ ನಿರ್ಮಾಣಕೆಲಸವು ಮೊತ್ತೊ೦ದೆಡೆಯಲ್ಲಿ ನಡೆಯುತ್ತಿದೆ.
ಲಕ್ಷದೀಪೋತ್ಸವಕ್ಕೆ ಭಕ್ತರು ಎಣ್ಣೆ ಹಾಗೂ ಭತ್ತಿಯನ್ನು ದೇವಸ್ಥಾನದ ಕಚೇರಿಗೆ ತಲುಪಿಸಬಹುದಾಗಿದೆ.

No Comments

Leave A Comment