ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

Olympics 2024 ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದಿದ್ದ Imane Khelif ಹೆಣ್ಣಲ್ಲ.. ಗಂಡು!: ವೈದ್ಯಕೀಯ ವರದಿ ಸೋರಿಕೆ

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರಿ ವಿವಾದಕ್ಕೆ ಗ್ರಾಸವಾಗಿ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಲ್ಜೇರಿಯಾದ ಬಾಕ್ಸರ್ Imane Khelif ಹೆಣ್ಣಲ್ಲ.. ಗಂಡು ಎಂದು ಹೇಳಲಾಗಿದ್ದು ಈ ಕುರಿತ ವೈದ್ಯಕೀಯ ವರದಿ ಸೋರಿಕೆಯಾಗಿ ವ್ಯಾಪಕ ಸುದ್ದಿಯಾಗುತ್ತಿದೆ.

ಹೌದು.. ಪ್ಯಾರಿಸ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಲ್ಜೇರಿಯಾದ ಬಾಕ್ಸರ್ Imane Khelif ಭಾರಿ ಸುದ್ದಿಗೆ ಗ್ರಾಸವಾಗಿದ್ದರು. Imane Khelif ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಫೈನಲ್ ನಲ್ಲಿ ಚಿನ್ನ ಕೂಡ ಗೆದ್ದಿದ್ದರು.

ಅವರ ವಿರುದ್ಧ ಸ್ಪರ್ಧಿಸಿದ್ದ ಸ್ಪರ್ಧಿಗಳು ಅವರ ಒಂದೊಂದೇ ಹೊಡೆತಕ್ಕೆ ಸುಸ್ತಾಗಿ ಸ್ಪರ್ಧಾಕಣದಿಂದ ಹೊರ ಬಂದಿದ್ದರು. ಅತಿಥೇಯ ಇಟಲಿಯ ಮಹಿಳಾ ಬಾಕ್ಸರ್ Angela Carini ಕೂಡ ಕೇವಲ 45 ಸೆಕೆಂಡ್ ನಲ್ಲೇ ರಿಂಗ್ ನಿಂದ ಹೊರಬಂದು ಬಿಕ್ಕಿ ಬಿಕ್ಕಿ ಅತ್ತಿದ್ದರು.

ಪಂದ್ಯ ಆರಂಭವಾಗುತ್ತಿದ್ದಂತೆಯೇ ಇಟಲಿಯ Angela Cariniಗೆ ಅಲ್ಜೇರಿಯಾದ Imane Khelif ಕೊಟ್ಟ ಹೊಡೆತ ಬಲವಾಗಿ ಬಿದ್ದಿತ್ತು. ಇದಾದ ಕೆಲವೇ ಸೆಕೆಂಡ್ ಗಳಲ್ಲಿ Angela Carini ಪಂದ್ಯವನ್ನು ರದ್ದು ಮಾಡುವಂತೆ ರೆಫರಿಗಳನ್ನು ಕೋರಿದರು. ಅಭ್ಯರ್ಥಿಯ ಆಶಯದಂತೆ ರೆಫರಿಗಳು ಪಂದ್ಯ ರದ್ದು ಮಾಡಿ ನಿಯಮದಂತೆ ಎದುರಾಳಿ Imane Khelif ರನ್ನು ವಿಜಯಿ ಎಂದು ಘೋಷಣೆ ಮಾಡಿದ್ದರು. ಈ ಪಂದ್ಯ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿವಾದಗಳ ಹೊರತಾಗಿಯೂ ಅಲ್ಜೇರಿಯಾದ ಬಾಕ್ಸರ್ Imane Khelif ಆ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಆದರೆ ಇದೀಗ ಅವರ ಕುರಿತು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದ್ದು. ಅಸಲಿಗೆ ಅಲ್ಜೇರಿಯಾದ ಬಾಕ್ಸರ್ Imane Khelif ಹೆಣ್ಣೇ ಅಲ್ಲ.. ಅವರು ಗಂಡು ಎಂದು ಹೇಳಲಾಗಿದೆ. ಈ ಕುರಿತ ವೈದ್ಯಕೀಯ ವರದಿಯೊಂದು ಸೋರಿಕೆಯಾಗಿದ್ದು, ಫ್ರೆಂಚ್ ಪತ್ರಕರ್ತ ಜಾಫರ್ ಐಟ್ ಔಡಿಯಾ ಹೊರಹಾಕಿರುವ ಮಾಹಿತಿ ಅನ್ವಯ ಅಲ್ಜೀರಿಯನ್ ಬಾಕ್ಸರ್ ಆಂತರಿಕ ವೃಷಣಗಳು ಮತ್ತು XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಹೆಣ್ಣೇ ಅಲ್ಲ. ಅವರು ಗಂಡು ಎಂದು ವಾದಿಸಿದ್ದಾರೆ. ಅಲ್ಲದೆ ಈ ಪರಿಸ್ಥಿತಿಯು 5-ಆಲ್ಫಾ ರಿಡಕ್ಟೇಸ್ ಕೊರತೆ ಎಂಬ ಅಸ್ವಸ್ಥತೆಯನ್ನು ಸೂಚಿಸುತ್ತದೆ ಎಂದು ವರದಿ ಮಾಡಿದ್ದಾರೆ.

ಜೂನ್ 2023 ರಲ್ಲಿ ಪ್ಯಾರಿಸ್‌ನ ಕ್ರೆಮ್ಲಿನ್-ಬೈಸೆಟ್ರೆ ಆಸ್ಪತ್ರೆ ಮತ್ತು ಅಲ್ಜೀರ್ಸ್‌ನ ಮೊಹಮದ್ ಲ್ಯಾಮಿನ್ ಡೆಬಾಘೈನ್ ಆಸ್ಪತ್ರೆಯ ತಜ್ಞರು ಈ ವರದಿ ತಯಾರಿಸಿದ್ದಾರೆ ಎಂದು ಹೇಳಲಾಗಿದ್ದು, ವಿವರವಾದ ವರದಿಯಲ್ಲಿ, ಖೇಲಿಫ್‌ನ ಜೈವಿಕ ಗುಣಲಕ್ಷಣಗಳಾದ ಆಂತರಿಕ ವೃಷಣಗಳ ಅಸ್ತಿತ್ವ ಮತ್ತು ಕೊರತೆ ಗರ್ಭಾಶಯವನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. Redux ವರದಿ ಮಾಡಿದಂತೆ MRI ವರದಿಯು ಮೈಕ್ರೊಪೆನಿಸ್ ಇರುವಿಕೆಯನ್ನು ಸೂಚಿಸಿದೆ ಎಂದು ಹೇಳಲಾಗಿದೆ.

 

No Comments

Leave A Comment