ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಕೋಲ್ಕತಾ: ಚೀನಾಗೆ ಹೊರಟಿದ್ದ ವಿಮಾನ ತುರ್ತು ಲ್ಯಾಂಡಿಂಗ್, ಹದಿಹರೆಯದ ಇರಾಕ್ ಯುವತಿ ಸಾವು!

ಕೋಲ್ಕತಾ: ಬಾಗ್ದಾದ್‌ನಿಂದ ಚೀನಾದ ಗುವಾಂಗ್‌ಝೌಗೆ ತೆರಳುತ್ತಿದ್ದ ಇರಾಕಿ ಏರ್‌ವೇಸ್ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಹಠಾತ್ತನೆ ಅಸ್ವಸ್ಥಗೊಂಡ ನಂತರ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.

ಬಳಿಕ 16 ವರ್ಷದ ಇರಾಕಿನ ಯುವತಿಯನ್ನು ನಗರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

100 ಪ್ರಯಾಣಿಕರು ಮತ್ತು 15 ಸಿಬ್ಬಂದಿಯನ್ನೊಳಗೊಂಡ IA-473 ವಿಮಾನ ಮಾರ್ಗ ಬದಲಿಸಿ ಬುಧವಾರ ರಾತ್ರಿ 10:18 ಕ್ಕೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿತ್ತು.

ಗುರುವಾರ ಮುಂಜಾನೆ 1.18 ರ ಸುಮಾರಿಗೆ ಇಬ್ಬರು ಸಹ ಪ್ರಯಾಣಿಕರೊಂದಿಗೆ ಹದಿಹರೆಯದ ಯುವತಿಯನ್ನು ಎಎಐ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ತಿಳಿಸಿದೆ ಎಂದು ಎಎಐ ಅಧಿಕಾರಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿದ್ದ ವೈದ್ಯಕೀಯ ತಂಡ ತಕ್ಷಣವೇ ಯುವತಿ ಡೆರಾನ್ ಸಮೀರ್ ಅಹ್ಮದ್ ಅವರನ್ನು ಪರಿಶೀಲಿಸಿತು. ನಾಡಿಮಿಡಿತ ಕಂಡುಬಂದಿಲ್ಲ. ಯಾವುದೇ ಹೃದಯ ಬಡಿತ ಕಂಡುಬಂದಿಲ್ಲವೂ ನಂತರ ಹೆಚ್ಚಿನ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಿದರು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

No Comments

Leave A Comment