ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ತ್ರಿಶೂರ್: ಒಂದೇ ದಿನ 3 ATM ದರೋಡೆ; 65 ಲಕ್ಷ ರೂ ದೋಚಿದ ಗ್ಯಾಂಗ್
ತ್ರಿಶೂರ್: ತ್ರಿಶೂರ್ ನಲ್ಲಿ ರಾತ್ರೋರಾತ್ರಿ 5 ಮಂದಿ ಇದ್ದ ದರೋಡೆ ಗ್ಯಾಂಗ್ ಎಸ್ ಬಿ ಐ ಎಟಿಎಂ ಲೂಟಿ ಮಾಡಿ 65 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದೆ. ಒಂದೇ ಬಾರಿಗೆ 3 ಬೇರೆ ಬೇರೆ ಪ್ರದೇಶಗಳ ಎಟಿಎಂ ಗಳಲ್ಲಿ ತಡ ರಾತ್ರಿ ಈ ದರೋಡೆ ನಡೆದಿದೆ.
ಮಧ್ಯರಾತ್ರಿ 2: 30 ರ ವೇಳೆಗೆ ಗ್ಯಾಸ್ ಕಟ್ಟರ್ ನ್ನು ಬಳಕೆ ಮಾಡಿ ಮಾಪ್ರಾಣಾಮ್ ನಲ್ಲಿ ದರೋಡೆ ಮಾಡಲಾಗಿದೆ. ಕ್ಯಾಶ್ ಟ್ರೇ ನ್ನು ತುಂಡರಿಸಿ ದರೋಡೆ ಮಾಡಲಾಗಿದ್ದು, ಬ್ಯಾಂಕ್ ಅಧಿಕಾರಿಗಳು ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಪ್ರೇ ಪೇಂಟ್ ಬಳಸಿ ಸಿಸಿಟಿವಿ ಕ್ಯಾಮರಾಗಳನ್ನು ಮುಚ್ಚಲಾಗಿತ್ತು. ಆದರೆ ಸ್ಥಳೀಯ ಹೊಟೆಲ್ ಬಳಿ ಇದ್ದ ಸಿಸಿಟಿವಿ ಮೂಲಕ ಮುಖ ಮುಚ್ಚಿಕೊಂಡಿರುವ ದರೋಡೆ ಕೋರರು ಎಟಿಎಂ ನತ್ತ ಧಾವಿಸುತ್ತಿರುವುದು ಪತ್ತೆಯಾಗಿದೆ.
ಬೆಳಗಿನ ಜಾವ 3.15ರ ಸುಮಾರಿಗೆ ಕೊಳಜಿ ಎಸ್‌ಬಿಐ ಎಟಿಎಂನಲ್ಲಿ ದರೋಡೆ ಮಾಡಿದ ನಂತರ ಶೋರನೂರು ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ನ್ನು ಅದೇ ರೀತಿಯಲ್ಲಿ ಲೂಟಿ ಮಾಡಲಾಗಿದೆ.ಪೊಲೀಸರು ತನಿಖೆ ಆರಂಭಿಸಿದರು. ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿದೆ. ಕೃತ್ಯಕ್ಕೆ ಗ್ಯಾಂಗ್ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.