ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಭಕ್ತರ ಗಮನಕ್ಕೆ
ಉಡುಪಿ:ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇತ್ತೀಚಿಗೆ ಹುಟ್ಟಿಕೊ೦ಡ ಲಡ್ದು ವಿಷಯದಿ೦ದಾಗಿ ಭಕ್ತರಲ್ಲಿ ಭಾರೀ ಅತ೦ಕವನ್ನು ಹುಟ್ಟು ಹಾಕಿತ್ತು. ಇದೀಗ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ಎಲ್ಲಾ ಭಕ್ತರಲ್ಲಿ ನಮ್ಮ ಕರಾವಳಿಕಿರಣ ಡಾಟ್ ಕಾ೦ನ ಮನವಿ ಇದಾಗಿದೆ.ಇನ್ನು ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಡೆದುಕೊಳ್ಳ ಬೇಕಾದರೆ ತಮ್ಮ ತಮ್ಮ ಆಧಾರ್ ಕಾರ್ಡು ಬಹಳ ಅಗತ್ಯವಾಗಿ ತೆಗೆದುಕೊ೦ಡು ಹೋಗಬೇಕಾಗುವ ಪ್ರಮೇಯವಿದೆ.
ಆಧಾರ್ ಕಾರ್ಡು ಇದ್ದಲ್ಲಿ ಲಡ್ಡು ಪ್ರಸಾದ್ ಪ್ರಸಾದ್ ದೊರಕುತ್ತದೆ ಮತ್ತು ಇದಕ್ಕಾಗಿ ಕ್ಯೂನಿಲ್ಲಬೇಕಾಗುತ್ತದೆ.ನ೦ತರ ನಿಗದಿ ಪದಿಸಿದ ಮೊತ್ತನೀಡಿ ಕೂಪನ್ ಪಡೆದುಕೊ೦ಡಾಗ ಲಡ್ದು ಪ್ರಸಾದ ನಿಮ್ಮ ನಿಮ್ಮ ಕೈ ಸೇರಲಿದೆ. ಆಧಾರ್ ಕಾರ್ಡಿನಲ್ಲಿರುವ ವ್ಯಕ್ತಿಯೇ ಇರಬೇಕು ಹೊರತು ಬೇರೆಯವರಿಗೆ ನೀಡಲಾಗುವುದಿಲ್ಲ. ಇನ್ನು ಮು೦ದೆ ದೇವಸ್ಥಾನಕ್ಕೆ ತೆರಳುವಾಗ ಆಧಾರ್ ಕಾರ್ಡ ತಪ್ಪದೇ ತೆಗೆದುಕೊ೦ಡು ಹೋಗುವ೦ತೆ ಭಕ್ತರಿಗೆ ಈ ಮಾಹಿತಿಯನ್ನು ನೀಡಿದ್ದೇವೆ.