ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಅಸ್ಸಾಂ ನಲ್ಲಿ ಟಿಎಂಸಿಗೆ ಮರ್ಮಾಘಾತ; ಪಕ್ಷ ತೊರೆದ ಅಧ್ಯಕ್ಷ ರಿಪುನ್ ಬೋರಾ!

ಅಸ್ಸಾಂ: ಪಶ್ಚಿಮ ಬಂಗಾಳದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ಮುಜುಗರಕ್ಕೀಡಾಗಿರುವ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಗೆ ಅಸ್ಸಾಂ ನಲ್ಲಿ ಅಘಾತ ಎದುರಾಗಿದೆ.ಅಸ್ಸಾಂ ನ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಸ್ಸಾಂ ನ ಜನತೆ ಟಿಎಂಸಿಯನ್ನು ಪಶ್ಚಿಮ ಬಂಗಾಳದ ಪ್ರಾದೇಶಿಕ ಪಕ್ಷವನ್ನಾಗಿ ಗುರುತಿಸುತ್ತಾರೆ. ಅದನ್ನು ತಮ್ಮ ಪಕ್ಷ ಎಂದು ಒಪ್ಪಿಕೊಳ್ಳಲು ಇಲ್ಲಿನ ಜನತೆ ಸಿದ್ಧರಿಲ್ಲ ಎಂದು ರಿಪುನ್ ಬೋರಾ ರಾಜೀನಾಮೆ ಬಳಿಕ ಹೇಳಿದ್ದಾರೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಗೆ ತಮ್ಮ ರಾಜೀನಾಮೆ ಕುರಿತು ಪತ್ರ ಬರೆದಿರುವ ರಿಪುನ್ ಬೋರಾ, ಅಸ್ಸಾಂನಲ್ಲಿ ಟಿಎಂಸಿಯನ್ನು ಸ್ವೀಕಾರಾರ್ಹಗೊಳಿಸಲು ಪಕ್ಷದ ವರಿಷ್ಠೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಲವು ಸಲಹೆಗಳನ್ನು ನೀಡಿದ್ದೇನೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಹೇಳಿದ್ದಾರೆ. ಆದರೆ ಅವುಗಳನ್ನು “ಅನುಷ್ಠಾನಗೊಳಿಸಲಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಅಸ್ಸಾಂ ಟಿಎಂಸಿ ಉತ್ತಮ ಸಾಮರ್ಥ್ಯವನ್ನು ಹೊಂದಿದೆ, ಆದರೆ ಪಶ್ಚಿಮ ಬಂಗಾಳದ ಪ್ರಾದೇಶಿಕ ಪಕ್ಷವಾಗಿ ಟಿಎಂಸಿ ಗ್ರಹಿಕೆ ಸೇರಿದಂತೆ ಮತ್ತೆ ಮತ್ತೆ ಎದುರಾಗುವ ಹಲವಾರು ಸಮಸ್ಯೆಗಳು ನಮ್ಮ ಪ್ರಗತಿಗೆ ಅಡ್ಡಿಯಾಗಿದೆ. ಈ ಗ್ರಹಿಕೆಯನ್ನು ಎದುರಿಸಲು, ನಾವು ಹಲವಾರು ಸಲಹೆಗಳನ್ನು ನೀಡಿದ್ದೇವೆ” ಎಂದು ಬೋರಾ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕೋಲ್ಕತ್ತಾದ ಟೋಲಿಗಂಗೆಯಲ್ಲಿರುವ ಭಾರತ ರತ್ನ ಡಾ.ಭುಪೇನ್ ಹಜಾರಿಕಾ ಅವರ ನಿವಾಸವನ್ನು ಪಾರಂಪರಿಕ ತಾಣವೆಂದು ಘೋಷಿಸುವ ಮತ್ತು ಕೂಚ್ ಬೆಹಾರ್‌ನಲ್ಲಿರುವ ಮಧುಪುರ್ ಸತ್ರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ಟಿಎಂಸಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಸ್ಸಾಮಿ ನಾಯಕನ ಅಗತ್ಯ ಇರುವುದನ್ನು ಗಮನಕ್ಕೆ ತಂದಿದ್ದೆ ಎಂದು ರಿಪುನ್ ಬೋರಾ ಹೇಳಿದ್ದಾರೆ. “ಈ ಕಳವಳಗಳನ್ನು ಪರಿಹರಿಸಲು ನಿಮ್ಮ ಮತ್ತು ನಮ್ಮ ಮುಖ್ಯಸ್ಥೆ ಮಮತಾ ದೀದಿ ಅವರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಕಳೆದ ಒಂದೂವರೆ ವರ್ಷಗಳಿಂದ ನಾನು ಪದೇ ಪದೇ ಪ್ರಯತ್ನಿಸಿದರೂ, ನಾನು ಯಶಸ್ವಿಯಾಗಲಿಲ್ಲ” ಎಂದು ಅಸ್ಸಾಂನ ಮಾಜಿ ಸಚಿವ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬೋರಾ ಹೇಳಿದ್ದಾರೆ.

ಅವರು ಎರಡು ವರ್ಷಗಳಿಂದ ಅಸ್ಸಾಂ ಟಿಎಂಸಿಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈ ಅವಧಿಯಲ್ಲಿ ಅವರು ರಾಜ್ಯಾದ್ಯಂತ ಜನರೊಂದಿಗೆ ವ್ಯಾಪಕವಾಗಿ ಸಂವಹನ ನಡೆಸಿದರು ಎಂದು ಹೇಳಿದರು.

No Comments

Leave A Comment