ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಭಾರತಕ್ಕೆ 8ನೇ ಪದಕ; ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಗೆದ್ದ ಯೋಗೇಶ್ ಕಥುನಿಯಾ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನ ಐದನೇ ದಿನ ಭಾರತಕ್ಕೆ ಎಂಟನೇ ಪದಕ ಲಭಿಸಿದೆ. ಪುರುಷರ ಎಫ್56 ಡಿಸ್ಕಸ್ ಥ್ರೋ ಈವೆಂಟ್​ನಲ್ಲಿ ಭಾರತದ ಯೋಗೇಶ್ ಕುಮಾರ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಯೋಗೇಶ್ ತನ್ನ ಮೊದಲ ಪ್ರಯತ್ನದಲ್ಲೇ 42.22 ಮೀಟರ್ ದೂರ ಡಿಸ್ಕಸ್ ಎಸೆದು ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪದಕದೊಂದಿಗೆ ಭಾರತ 1 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗೊಳಿಂದಿಗೆ ಪದಕ ಪಟ್ಟಿಯಲ್ಲಿ 30ನೇ ಸ್ಥಾನವನ್ನು ಪಡೆದುಕೊಂಡಿದೆ. ಯೋಗೇಶ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಎರಡನೇ ಬೆಳ್ಳಿ ಪದಕವಾಗಿದ್ದು, ಅವರು 2021 ರಲ್ಲಿ ನಡೆದಿದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.

ಸತತ 3ನೇ ಬಾರಿಗೆ ಚಿನ್ನ ಗೆದ್ದ ಬಟಿಸ್ಟಾ

ಉಳಿದಂತೆ ಈ ಸ್ಪರ್ಧೆಯಲ್ಲಿ ಬ್ರೆಜಿಲ್​ನ ಬಟಿಸ್ಟಾ ಸಾರ್ವಕಾಲಿಕ ಪ್ಯಾರಾಲಿಂಪಿಕ್ಸ್ ದಾಖಲೆಯನ್ನು (45.59 ಮೀ) ತನ್ನ ಎರಡನೇ ಎಸೆತದಲ್ಲಿ 46.45 ಮೀ. ದೂರ ಎಸೆಯುವ ಮೂಲಕ ಮುರಿದರು. ಆದಾಗ್ಯೂ, ಇಲ್ಲಿಗೆ ನಿಲ್ಲದ ಬಟಿಸ್ಟಾ ತಮ್ಮ ಎರಡನೇ-ಕೊನೆಯ ಪ್ರಯತ್ನದಲ್ಲಿ 46.86 ಮೀ. ದೂರ ಎಸೆದು ಪ್ಯಾರಾಲಿಂಪಿಕ್ಸ್​ನಲ್ಲಿ ನೂತನ ದಾಖಲೆಯ ಸೃಷ್ಟಿಸಿದರು. ಇದಲ್ಲದೆ ಬಟಿಸ್ಟಾ ಅವರಿಗೆ ಇದು ಸತತ ಮೂರನೇ ಚಿನ್ನದ ಪದಕವಾಗಿದ್ದು, ಅವರು 2016 ರಲ್ಲಿ ರಿಯೊದಲ್ಲಿ ನಡೆದಿದ್ದ ತಮ್ಮ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನ ಗೆದ್ದಿದ್ದರೆ, 2021 ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲೂ ಚಿನ್ನದ ಪದಕ ಗೆದ್ದಿದ್ದರು. ಇದರ ಜೊತೆಗೆ ಬಟಿಸ್ಟಾ ಅವರು ದುಬೈ, ಪ್ಯಾರಿಸ್ ಮತ್ತು ಕೋಬ್‌ನಲ್ಲಿ ಕ್ರಮವಾಗಿ 2019, 2023 ಮತ್ತು 2024 ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳೊಂದಿಗೆ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.

No Comments

Leave A Comment