ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕುಂದಾಪುರ: ಸೂಟ್‌ಕೇಸ್‌ನಲ್ಲಿ ಇರಿಸಿದ್ದ 4.8 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕುಂದಾಪುರ: ಸೆ.1 ಮನೆಯಲ್ಲಿ ಸೂಟ್‌ಕೇಸ್‌ನಲ್ಲಿ ಇರಿಸಲಾಗಿದ್ದ 100 ಗ್ರಾಂ ತೂಕದ 4.8 ಲಕ್ಷ ಮೌಲ್ಯದ ಮೂರು ಚಿನ್ನದ ಬಳೆಗಳು ಕಳ್ಳತನವಾದ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ನಿವಾಸಿ ಮರಿಯಮ್ ಶಹರಿನ್ (26) ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಆಗಸ್ಟ್ 22 ರಂದು ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆಯ ಕಲ್ಕಂಬದಲ್ಲಿರುವ ತನ್ನ ಮಾವ ಮಹಮ್ಮದ್ ಖಾಸಿಂ ಅವರ ಮನೆಗೆ ಗೃಹಪ್ರವೇಶ ಮತ್ತು ಮದುವೆಗೆಂದು ತೆರಳಿದ್ದರು. ಆಗಸ್ಟ್ 26 ರ ಸಂಜೆ ಮನೆಗೆ ಹಿಂದಿರುಗಿದ ಅವರು ನಂತರ ಮೂರು ಬಳೆಗಳು ಮತ್ತು ಇತರ ಚಿನ್ನಾಭರಣಗಳನ್ನು ಬಟ್ಟೆಗಳೊಂದಿಗೆ ಸೂಟ್‌ಕೇಸ್‌ನಲ್ಲಿ ಇರಿಸಿದ್ದಳು. ಆದರೆ, ಆಗಸ್ಟ್ 27ರ ಸಂಜೆ ಸೂಟ್‌ಕೇಸ್ ತೆರೆದಾಗ ಚಿನ್ನಾಭರಣಗಳು ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment