ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ದೆಹಲಿಯಲ್ಲಿ ಭಾರೀ ಮಳೆ; ನದಿಯಂತಾದ ರಸ್ತೆಗಳು, ಮೆಗಾ ಟ್ರಾಫಿಕ್ ಜಾಮ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ರಸ್ತೆಗಳು ನದಿಯಂತಾಗಿವೆ. ಪರಿಣಾಮ ಗುರುವಾರ ಬೆಳಗ್ಗೆ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ, ಕನಿಷ್ಠ ತಾಪಮಾನವು 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂದು ಬೆಳಗ್ಗೆ 8.30ರ ವೇಳೆಗೆ ತೇವಾಂಶದ ಪ್ರಮಾಣ ಶೇ.100ರಷ್ಟಿತ್ತು.
ರಾಷ್ಟ್ರ ರಾಜಧಾನಿಗೆ ಪ್ರಾತಿನಿಧಿಕ ಡೇಟಾವನ್ನು ಒದಗಿಸುವ ಸಫ್ದರ್‌ಜಂಗ್ ವೀಕ್ಷಣಾಲಯವು, ಕಳೆದ 24 ಗಂಟೆಗಳಲ್ಲಿ, ಗುರುವಾರ ಬೆಳಗ್ಗೆ 8.30 ರವರೆಗೆ 77.1 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ.
ಲೋಧಿ ರಸ್ತೆಯ ವೀಕ್ಷಣಾಲಯದಲ್ಲಿ 92.2 ಮಿಮೀ, ರಿಡ್ಜ್ ನಲ್ಲಿ 18.2 ಮಿಮೀ, ಪಾಲಂನಲ್ಲಿ 54.5 ಮಿಮೀ ಮತ್ತು ಅಯಾನಗರದಲ್ಲಿ 62.4 ಮಿಮೀ ಮಳೆ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
IMD ನಿಯತಾಂಕಗಳ ಪ್ರಕಾರ, 2.5 ರಿಂದ 15.5 ಮಿಮೀ ಮಳೆಯನ್ನು ಲಘು ಮಳೆ ಎಂದು, 15.6 ಮಿಮೀ ನಿಂದ 64.4 ಮಿಮೀ ಮಳೆಯಾದರೆ ಮಧ್ಯಮ ಎಂದು, 64.5 ರಿಂದ 115.5 ಮಿಮೀ ಮಳೆಯನ್ನು ಭಾರೀ ಮಳೆ ಎಂದು ಹಾಗೂ 115.6 ರಿಂದ 204.4 ಮಿಮೀ ಮಳೆಯನ್ನು ಅತಿ ಹೆಚ್ಚು ಮಳೆ ಎಂದು ಎಂದು ಪರಿಗಣಿಸಲಾಗುತ್ತದೆ.
ಹಗಲಿನಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮೋಡ ಕವಿದ ವಾತಾವರಣ ಇರುತ್ತದೆ ಎಂದು IMD ಮುನ್ಸೂಚನೆ ನೀಡಿದೆ.