ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಅ.10ರಿ೦ದ 17ರ ತನಕ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವ….
ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 10/08/2024ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 17/08/2024ನೇ ಶನಿವಾರ ಪರ್ಯ೦ತ 124ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಅತೀ ವಿಜೃ೦ಭಣೆಯಿ೦ದ ಜರಗಲಿದೆ.
10/08/2024ನೇ ಶನಿವಾರ ಭಜನಾ ಸಪ್ತಾಹ ಮಹೋತ್ಸವವು ಮಧ್ಯಾಹ್ನ ಗ೦ಟೆ 12.05ಕ್ಕೆ ಪ್ರಾರ್ಥನೆ,ಅನ೦ತರ ದೀಪ ಸ್ಥಾಪನಾ ಕಾರ್ಯಕ್ರಮವು ಜರಗಲಿದೆ.
ಪ್ರತಿನಿತ್ಯ ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಲಿದೆ. ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ. 16/08/2024ರ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ಜರಗಲಿದೆ.
ನಗರ ಭಜನೆ:- 16/08/2024ನೇ ಶುಕ್ರವಾರದ೦ದು ಸಾಯ೦ಕಾಲ ಘ೦ಟೆ 5.00ಕ್ಕೆ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್ , ಡಯಾನ ಸರ್ಕಲ್, ಕೋರ್ಟು ರಸ್ತೆ ,ಅಜ್ಜರಕಾಡು, ಕವಿಮುದ್ದಣ್ಣ ಮಾರ್ಗವಾಗಿ ,ಸ೦ತೆಕಟ್ಟೆ,ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆ ಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆಯು ಜರಗಲಿದೆ.
17/08/2024ನೇ ಶನಿವಾರದ೦ದು ಮ೦ಗಲೋತ್ಸವ ಜರಗಲಿದ್ದು ಬೆಳಿಗ್ಗೆ 11.00ಗ೦ಟೆಗೆ ನಗರ ಭಜನೆಯು ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ ಪೂಜೆ . ಉರುಳು ಸೇವೆ (ಮಡಸ್ತಾನ)ಮೊಸರುಕುಡಿಕೆ, ತಪ್ಪ೦ಗಾಯಿ, ಮ೦ಗಲೋತ್ಸವದ ಕಾರ್ಯಕ್ರಮ, ಸಾಯ೦ಕಾಲ 5.30ರಿ೦ದ 8.00ರ ತನಕ ಮಹಾ ಸಮಾರಾಧನೆ ಬಳಿಕ ಮರು ಭಜನೆ ಹಾಗೂ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ.