ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಮಲ್ಪೆ:ಪಿ. ರಾಧಾಕೃಷ್ಣ ಶೆಣೈ ಹೃದಯಾಘಾತದಿಂದ ನಿಧನ
ಉಡುಪಿ: ಜಿ .ಎಸ್. ಬಿ ಸಮಾಜ ಮಲ್ಪೆಯ ಶ್ರೀ ರಾಮ ಮಂದಿರ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಪಿ. ರಾಧಾಕೃಷ್ಣ ಶೆಣೈಯವರು ಅವರು ಇಂದು ಸೋಮವಾರದ೦ದು ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ. ಸದಾ ನಗುಮೊಗದಿಂದ ಅತ್ಯಂತ ಸರಳ ಸ್ವಭಾವ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು.
ಇವರ ಆಗಲುವಿಕೆಯ ದುಃಖ ನೀಗುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಸಮಸ್ತ ಜಿ ಎಸ್ ಬಿ ಸಮಾಜ ಬಾ೦ಧವರು, ಶ್ರೀರಾಮಮ೦ದಿರದ ಆಡಳಿತ ಮ೦ಡಳಿಯ ಸರ್ವಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.