Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಸೋಲು
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನೀರಸ ಪ್ರದರ್ಶನ ಮೂಡಿಬಂದಿದೆ. ಶನಿವಾರ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಶೂಟರ್ಗಳು ಭಾಗವಹಿಸಿದ್ದರು. ಆದರೆ ಮಿಶ್ರ ಏರ್ ರೈಫಲ್ ವಿಭಾಗದಲ್ಲಿ ಪದಕದ ಸುತ್ತಿಗೆ ಪ್ರವೇಶಿಸುವಲ್ಲಿ ಭಾರತೀಯ ಶೂಟರ್ಗಳು ವಿಫಲರಾಗಿದ್ದಾರೆ.
-
10 ಮೀಟರ್ ಏರ್ ರೈಫಲ್ (ಮಿಶ್ರ) ಅರ್ಹತಾ ಸುತ್ತಿನಲ್ಲಿ ಸಂದೀಪ್ ಸಿಂಗ್, ಅರ್ಜುನ್ ಬಬೌತಾ, ರಮಿತಾ ಜಿಂದಾಲ್ ಮತ್ತು ಎಲವೆನಿಲ್ ವಲರಿವನ್ ಸ್ಪರ್ಧಿಸಿದ್ದರು.
-
10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ರಮಿತಾ ಮತ್ತು ಅರ್ಜುನ್ 6ನೇ ಸ್ಥಾನ ಪಡೆದರೆ, ಎಲವೆನಿಲ್ ಮತ್ತು ಸಂದೀಪ್ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
-
10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್ ಸ್ಪರ್ಧೆಯಲ್ಲಿ ಟಾಪ್-4 ತಂಡಗಳು ಮಾತ್ರ ಪದಕ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನ 10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ಭಾರತ ಪದಕ ಗೆಲ್ಲುವ ಕನಸು ಕಮರಿದೆ.
-
ಚೀನಾ ಮತ್ತು ಕೊರಿಯಾ ದೇಶಗಳು 10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಸುತ್ತಿನಲ್ಲಿವೆ. ಹಾಗೆಯೇ ಕಜಕಿಸ್ತಾನ್ ಮತ್ತು ಜರ್ಮನಿ ಕಂಚಿನ ಪದಕ ಸುತ್ತಿನಲ್ಲಿವೆ.
ಭಾರತೀಯ ಶೂಟರ್ಗಳು ಪಡೆದ ಅಂಕಗಳು:
-
➡️ರಮಿತಾ ಮತ್ತು ಅರ್ಜುನ್- 6ನೇ ಸ್ಥಾನ (628.7 ಅಂಕಗಳು)
-
➡️ಎಲವೆನಿಲ್ ಮತ್ತು ಸಂದೀಪ್- 12ನೇ ಸ್ಥಾನ (626.3 ಅಂಕಗಳು)