ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನಾನು ಪ್ರಚಾರಕ್ಕೆ ಮಾತಾಡಲ್ಲ: ಪರಿಹಾರ ಈಗಾಗಲೇ ವಿತರಿಸಿದ್ದೇವೆ : ಕೃಷ್ಣ ಭೈರೇಗೌಡ
ಕಾರವಾರ: ಉಳುವರೆ ಗ್ರಾಮಸ್ಥರಿಗೆ ಬದಲಿ ಜಾಗ ಕೊಟ್ಟು ,ಮನೆ ಕಟ್ಟಿಕೊಡ್ತೇವೆ. ಜನ ಸಹಕಾರ ಮಾಡಬೇಕು. ಬದಲಿ ಮನೆಗೆ ಸ್ಥಳಾಂತರ ಆದ ಮೇಲೆ ಮೂಲ ಮನೆಯಲ್ಲಿ ವಾಸ ಮಾಡಬಾರದು ಎಂದು ಕಂದಾಯ ಸಚಿವ ಕೃಷ್ಣಾ ಭೈರೇಗೌಡ ಹೇಳಿದರು.
ಅವರು ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ವೀಕ್ಷಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಕುಮಾರಸ್ವಾಮಿ ಪುಡಿಗಾಸು ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಅವರು ರಾಷ್ಟ್ರೀಯ ಹೆದ್ದಾರಿ ಸರಿಪಡಿಸುವ ಕೆಲಸ ಮಾಡಲಿ.ನಮ್ಮ ಕೆಲಸ ನಾವು ಮಾಡ್ತೇವೆ. ಈ ಹೆದ್ದಾರಿ ನಿರಂತರ ಕುಸಿಯುವ ಕೆಸರು ಪ್ರದೇಶ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ನೀಡಿದೆ. ಈ ವರದಿಯನ್ನು ಕೇಂದ್ರ ಸರಕಾರಕ್ಕೆ ನೀಡುತ್ತೇವೆ ಎಂದರು.
ಕುಸಿಯುವ ಗುಡ್ಡದ ಮಧ್ಯೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಕೆಲಸ ಮಾಡುತ್ತಿದೆ. ಜೆಸಿಬಿ, ಹಿಟಾಚಿ ಬಳಸಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದೇವೆ ಅಲ್ಲದೆ ಮೃತರಿಗೆ ಘಟನೆ ನಡೆದ ಸಂಜೆ ಅದೇ ದಿನ ೫ ಲಕ್ಷ ಪರಿಹಾರ ವಿತರಿಸಲಾಗಿದೆ. ಬಲೆ ಬೋಟ್ ಕಳೆದು ಕೊಂಡ ೫೯ ಕುಟುಂಬಕ್ಕೆ ೧೪ ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು