ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಟ್ರಂಪ್ ಹತ್ಯೆ ಪ್ರಯತ್ನ; ಹೆಂಡತಿ, ಮಕ್ಕಳನ್ನು ಕಾಪಾಡಲು ಗುಂಡಿಗೆ ಎದೆಯೊಡ್ಡಿದ ಅಪ್ಪ
ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಅವರನ್ನು ಕೊಲೆ ಮಾಡಲೆಂದು ಶೂಟರ್ ಒಬ್ಬ ಗುಂಡು ಹಾರಿಸಿದ್ದ. ಆ ಗುಂಡು ಕೊಂಚ ಗುರಿ ತಪ್ಪಿ ಟ್ರಂಪ್ ಕಿವಿಯನ್ನು ಸೀಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರಿಗೆ ಗುಂಡು ತಾಗಿ ಅವರು ಮೃತಪಟ್ಟೊದ್ದರು. ಆ ವ್ಯಕ್ತಿ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಗುಂಡಿನಿಂದ ರಕ್ಷಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ.
ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಪ್ರೇಕ್ಷಕನನ್ನು 50 ವರ್ಷ ವಯಸ್ಸಿನ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಎರಡು ಹೆಣ್ಣುಮಕ್ಕಳ ತಂದೆ ಕೋರೆ ಕಾಂಪರೇಟೋರ್ ಎಂದು ಗುರುತಿಸಲಾಗಿದೆ. ಅವರು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಟ್ರಂಪ್ ಅವರ ಬೆಂಬಲಿಗರಾಗಿದ್ದರು. ತಮ್ಮ ಕುಟುಂಬದೊಂದಿಗೆ ಟ್ರಂಪ್ ಭಾಷಣ ಕೇಳಲು ಬಂದಿದ್ದ ಅವರಿಗೆ ಗುಂಡು ತಾಗಿ ಮೃತಪಟ್ಟಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ನಡೆದ ಪ್ರಚಾರ ರ‍್ಯಾಲಿಯಲ್ಲಿ ಗುಂಡಿನ ದಾಳಿಗೆ ಬಲಿಯಾದವರು 50 ವರ್ಷದ ಕೋರೆ ಕಾಂಪೆರಾಟೋರ್ ಎಂಬ ಅಗ್ನಿಶಾಮಕ ದಳದ ಮಾಜಿ ಮುಖ್ಯಸ್ಥರಾಗಿದ್ದವರು ಎಂದು ಪೆನ್ಸಿಲ್ವೇನಿಯಾದ ಗವರ್ನರ್ ಜೋಶ್ ಶಾಪಿರೊ ಮಾಹಿತಿ ನೀಡಿದ್ದಾರೆ. ಅವರು ವೀರ ಮರಣ ಹೊಂದಿದ್ದಾರೆ ಎಂದು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ಟ್ರಂಪ್ ಬೆಂಬಲಿಗರಾದ ಕಾಂಪರೇಟೋರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಗುಂಡೇಟು ಸ್ಫೋಟಗೊಂಡಾಗ ಅವರು ತಮ್ಮ ಕುಟುಂಬವನ್ನು ಕಾಪಾಡಲು ಅವರ ಮೇಲೆ ಬಿದ್ದು, ಗಟ್ಟಿಯಾಗಿ ತಬ್ಬಿಕೊಂಡರು. ಈ ವೇಳೆ ಅವರಿಗೆ ಗುಂಡು ತಾಗಿದೆ.
ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ಕೋರೆ ಅಗ್ನಿಶಾಮಕ ಸಿಬ್ಬಂದಿಯಾಗಿದ್ದರು. ಕೋರೆ ಪ್ರತಿ ಭಾನುವಾರ ಚರ್ಚ್‌ಗೆ ಹೋಗುತ್ತಿದ್ದರು. ತಮ್ಮ ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದ ಅವರು ತಮ್ಮ ಕುಟುಂಬವನ್ನು ಬಚಾವ್ ಮಾಡಿ ಪ್ರಾಣಬಿಟ್ಟಿದ್ದಾರೆ.
ಪೆನ್ಸಿಲ್ವೇನಿಯಾದ ರ್ಯಾಲಿಯಲ್ಲಿ ಇತರ ಇಬ್ಬರು ವ್ಯಕ್ತಿಗಳು ಸಹ ಗುಂಡು ಹಾರಿಸಲ್ಪಟ್ಟರು ಎಂದು ಗವರ್ನರ್ ಶಾಪಿರೊ ತಿಳಿಸಿದ್ದಾರೆ. ಪೆನ್ಸಿಲ್ವೇನಿಯಾ ರಾಜ್ಯ ಪೊಲೀಸರ ಪ್ರಕಾರ, ಗಾಯಗೊಂಡವರನ್ನು 57 ವರ್ಷದ ಡೇವಿಡ್ ಡಚ್ ಮತ್ತು 74 ವರ್ಷದ ಜೇಮ್ಸ್ ಕೋಪನ್‌ಹೇವರ್ ಎಂದು ಗುರುತಿಸಲಾಗಿದೆ. ಇಬ್ಬರೂ ಚೇತರಿಸಿಕೊಳ್ಳುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.