ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉತ್ತರಕನ್ನಡ: ವರುಣನ ಆರ್ಭಟಕ್ಕೆ ತುಂಬಿ ಹರಿಯುತ್ತಿರುವ ಚಂಡಿಕಾನದಿ:ರಸ್ತೆ ಸಂಚಾರ ಬಂದ್
ಶಿರಸಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಶಿರಸಿ-ಕುಮಟಾ ಮಾರ್ಗದಲ್ಲಿಕತಗಾಲ ಸಮೀಪದ ಚಂಡಿಕಾ ನದಿ ತುಂಬಿ ಹರಿಯುತ್ತಿರುವುದರಿಂದ ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ಸಿದ್ದಾಪುರ ಭಾಗದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಸಂಚಾರ ವ್ಯತ್ಯಯವಾಗಿದ್ದು, ರಸ್ತೆ ಇಕ್ಕೆಲದಲ್ಲಿ ಅನೇಕ ವಾಹನಗಳು ನಿಂತು ಕೊಂಡಿವೆ.
ಶಿರಸಿಯಿಂದ ಕರಾವಳಿ ಭಾಗಕ್ಕೆ ದೇವಿಮನೆ ಘಟ್ಟ ಪ್ರದೇಶ ಬಳಸಿ ಈ ಮಾರ್ಗ ಇದ್ದು, ನಿಲೇಕಣಿ ಬಳಿಯೇ ಯಾಣ ಅಥವಾ ಯಲ್ಲಾಪುರ ಅಂಕೋಲಾ ಮಾರ್ಗ ಬಳಸಲು ಸೂಚಿಸಿದ್ದಾರೆ.
ಕರಾವಳಿ ಸಂಪರ್ಕಕ್ಕೆ ಸಿದ್ದಾಪುರ-ಮಾವಿನಗುಂಡಿ- ಹೊನ್ನಾವರ ಮಾರ್ಗದಲ್ಲೂ ಗುಡ್ಡ ಜರಿದು ಸಂಪರ್ಕಕ್ಕಾಗಿ ತೆರವಿನ ಕಾರ್ಯ ನಡೆದಿದೆ.