ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ

ಉತ್ತರಕನ್ನಡ: ವರುಣನ ಆರ್ಭಟಕ್ಕೆ ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌:ರಸ್ತೆ ಸಂಚಾರ ಬಂದ್

ಶಿರಸಿ: ಇಲ್ಲಿನ ರಾಷ್ಟ್ರೀಯ‌ ಹೆದ್ದಾರಿ ಶಿರಸಿ-ಕುಮಟಾ ಮಾರ್ಗದಲ್ಲಿ‌ಕತಗಾಲ‌ ಸಮೀಪದ ಚಂಡಿಕಾ‌ ನದಿ‌ ತುಂಬಿ‌ ಹರಿಯುತ್ತಿರುವುದರಿಂದ ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ಸೂಚಿಸಲಾಗಿದೆ.

ಸಿದ್ದಾಪುರ ಭಾಗದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಸಂಚಾರ ವ್ಯತ್ಯಯವಾಗಿದ್ದು, ರಸ್ತೆ ಇಕ್ಕೆಲದಲ್ಲಿ ಅನೇಕ ವಾಹನಗಳು ನಿಂತು ಕೊಂಡಿವೆ.

ಶಿರಸಿಯಿಂದ ಕರಾವಳಿ ಭಾಗಕ್ಕೆ ದೇವಿಮನೆ ಘಟ್ಟ ಪ್ರದೇಶ ಬಳಸಿ‌ ಈ ಮಾರ್ಗ ಇದ್ದು, ನಿಲೇಕಣಿ‌ ಬಳಿಯೇ ಯಾಣ‌ ಅಥವಾ ಯಲ್ಲಾಪುರ ಅಂಕೋಲಾ‌ ಮಾರ್ಗ ಬಳಸಲು ಸೂಚಿಸಿದ್ದಾರೆ.
ಕರಾವಳಿ ಸಂಪರ್ಕಕ್ಕೆ ಸಿದ್ದಾಪುರ-ಮಾವಿನಗುಂಡಿ- ಹೊನ್ನಾವರ ಮಾರ್ಗದಲ್ಲೂ ಗುಡ್ಡ ಜರಿದು ಸಂಪರ್ಕಕ್ಕಾಗಿ ತೆರವಿನ ಕಾರ್ಯ ನಡೆದಿದೆ.

No Comments

Leave A Comment