ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ ಜಿಲ್ಲೆಯಾದ್ಯಂತ ವರುಣನ ಆರ್ಭಟ: ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲ ಜಲದಿಗ್ಬಂದನ

ಕುಂದಾಪುರ ತಾಲೂಕಿನ ಅತ್ಯಂತ ಬಾರಿ ಮಳೆಯಾಗುತ್ತಿದ್ದು, ನದಿ ಇಕ್ಕಲಗಳು ತುಂಬಿ ಹರಿಯುತ್ತಿದ್ದು,ಅಪಾರ ಪ್ರಮಾಣದ ಆಸ್ತಿಪಾಸ್ತಿಗಳ ಮೇಲೆ ನೀರು ನುಂಗಿದೆ. ವರ್ಷ ಪ್ರತಿ ಸುರಿಯುವ ಮಳೆಯ ಈ ಬಾರಿ ತನ್ನ ಜಲಧಾರೆಯನ್ನ ಹೆಚ್ಚಿಸಿಕೊಂಡಿದೆ. ತಾಲೂಕಿನ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಪ್ರಮಾಣವನ್ನ ಮೀರಿ ಹರಿಯುತ್ತಿದೆ. ತಾಲೂಕಿನ ಬಹುತೇಕ ಗ್ರಾಮದ ನದಿಗಳು ಜಲಾವೃತ ಆಗಿರುವುದು ಕಂಡುಬಂದಿದೆ.

ಕಮಲಶಿಲೆ ದುರ್ಗಾಪರಮೇಶ್ವರಿ ದೇಗುಲ ಜಲ ದಿಗ್ಬಂಧನ ಬಂಧನ :-
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇಗುಲ ನಿನ್ನೆ ಸುರಿದ ಭಾರಿ ಮಳೆಗೆ ಜಲದಿಗ್ಬಂದನ ಉಂಟಾಗಿದೆ. ಕರಾವಳಿಯ ಪುರಾಣ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಕಮಲಶಿಲೆ ದೇಗುಲವು ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನೆಲೆ ನಿಂತು, ಭಕ್ತರಿಗೆ ವಿಶಿಷ್ಟ ರೀತಿಯ ರಕ್ಷಣೆಯನ್ನು ನೀಡುತ್ತಿದ್ದಾಳೆ. ಪ್ರತಿ ವರ್ಷವೂ ಕುಜ್ಜ ನದಿಯು ಭರ್ತಿಯಾಗಿ ದೇಗುಲದ ಒಳ ಪ್ರವೇಶದೊಂದಿಗೆ ಗಂಗೆ ಸ್ಥಾನದ ಮೂಲಕ ದೇಗುಲ ಪ್ರವೇಶವನ್ನು ಮಾಡುವುದು ವರ್ಷಪ್ರತಿಯಂತೆ ನಡೆಯುವಂತಹ ಪದ್ಧತಿ ಅದೇ ರೀತಿ ನಿನ್ನೆ ರಾತ್ರಿ ಒಂದು ಗಂಟೆಗೆ ಸರಿಯಾಗಿ ದೇಗುಲ ಒಳ ಪ್ರವೇಶದೊಂದಿಗೆ ನೀರು ಹರಿದು ಭರ್ತಿ ಆಯಿತು. ಇದು ತದನಂತರ ದೇಗುಲದ ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಪ್ರಥಮ ಪೂಜೆಯನ್ನು ನೆರವೇರಿಸಿದರು.

 

ಬೈಂದೂರು ಪ್ರದೇಶದಲ್ಲಿ ಒಮ್ಮೆಲೆ ಸುರಿದು ಗಾಳಿ ಮಳೆಯಿಂದಾಗಿ ಹಲವಾರು ಮನೆಯ ಮೇಲ್ಛಾವಣಿ ಹಾರಿಸಿಕೊಂಡು ಹೋಗಿದೆ.ಬೈಂದೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ವಲಯ ವ್ಯಾಪ್ತಿಯ ಶಾಲೆಗಳಿಗೆ ಇಂದು ಜು.4 ರಂದು ರಜೆ ಘೋಷಿಸಲಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಿಕ್ಷಣ ವಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಇಡೀ ಬೈಂದೂರು ತಾಲೂಕಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ. ಹಲವೆಡೆ ಹಲವಾರು ವಿದ್ಯಾರ್ಥಿಗಳು ಹಳ್ಳ ಕೈ ಸೇತುವೆಗಳನ್ನು ದಾಟಿ ಶಾಲೆಗೆ ಬರುತ್ತಿರುವ ಕಾರಣ ಮುಂಜಾಗ್ರತ ಕ್ರಮವಾಗಿ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದು, ಮಕ್ಕಳನ್ನು ನೀರಿಗೆ ಇಳಿಯದಂತೆ ನೀರಲ್ಲಿ ಆಟವಾಡದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ. ತಾಲೂಕಿನ ಬಹುತೇಕ ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಅಪಾಯ ಮಟ್ಟವನ್ನ ಮೀರಿ ಹರಿಯುತ್ತಿದೆ ಅದಲ್ಲದೆ ಸ್ಥಿತಿಲಗೊಳ್ಳುತ್ತಿರುವ ಸೇತುವೆ ಮೇಲ್ಭಾಗದಲ್ಲಿ ಜನರು ನೀರಿಗಿಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ.

No Comments

Leave A Comment