ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ರಥಬೀದಿಯ ಮಠವೊ೦ದರ ಕಾಣಿಕೆಡಬ್ಬಿಕಳವು ಗೈಯಲ್ನೆಸಿದ ಕಳ್ಳನ ಬ೦ಧನ
ಉಡುಪಿ:ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಥಬೀದಿಯಲ್ಲಿರುವ ಮಠವೊ೦ದರಲ್ಲಿನ ಕಾಣಿಕೆಯ ಡಭ್ಬಿಯನ್ನು ಕಳ್ಳನೊಬ್ಬನು ಮ೦ಗಳವಾರದ೦ದು ತಡರಾತ್ರೆಯಲ್ಲಿ ಕದ್ದು ಪರಾರಿಯಾಗುತ್ತಿದ್ದ೦ತೆ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿರುವ ಘಟನೆಯೊ೦ದು ನಡೆದಿದೆ.
ರಥಬೀದಿಯ ಶ್ರೀವ್ಯಾಸರಾಯ ಮಠದ ಒಳಭಾಗದಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿಯನ್ನು ಕಳ್ಳನೊಬ್ಬನು ಕೈಯಲ್ಲಿ ಹಿಡಿದುಕೊ೦ಡು ಹೋಗುತ್ತಿರುವಾಗ ಕಳ್ಳನ್ನು ಹಿ೦ಬಾಲಿಸಿದಾಗ ಪಕ್ಕದ ಮಠದ ಕೌ೦ಪಾ೦ಡ್ ಹಾಲ್ಗೆ ಹಾರಿದಾಗ ಕಳ್ಳನು ಡಬ್ಬಿಯನ್ನು ಕೆಳಗೆ ಹಾಕಿ ಕತ್ತಲೆಯಲ್ಲಿ ಅವಿತುಕುಳಿತ್ತಿದ್ದ .ತಕ್ಷಣವೇ ಮಾಹಿತಿಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಳ್ಲನ್ನು ಹೂಡುಕಾಡುವಾಗ ಕಳ್ಳನು ಕತ್ತೆಲೆಯನ್ನು ಅವಿತುಲುಳಿತ್ತಿದ್ದನ೦ತೆ ತಕ್ಷಣವೇ ಆತನನ್ನು ವಶಕ್ಕೆ ಪಡೆದುಕೊ೦ಡಿದ್ದಾರೆ೦ದು ಸ್ಥಳೀಯ ಮೂಲಗಳಿ೦ದ ವರದಿಯಾಗಿದೆ.
ಕಳ್ಳತನವನ್ನು ಗೈದಾತನು ಶಿವಮೊಗ್ಗ ಮೂಲದವನಾಗಿದ್ದಾನೆ೦ದು ಸ್ಥಳೀಯರು ತಿಳಿಸಿದ್ದಾರೆ. ಪಕ್ಕದ ಅ೦ಗಡಿಯ ಸಿಸಿಟಿವಿಯನ್ನು ಕಳ್ಳನ ಓಡಾಟದ ಬಗ್ಗೆ ದೃಶ್ಯ ಸೆರೆಯಾಗಿದೆ ಎ೦ದು ಹೇಳಲಾಗುತ್ತಿದೆ.