ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಸೈಬರ್ ಕ್ರೈಂನಲ್ಲಿ ಭಾಗಿ ಆರೋಪ: ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ

ಕೊಲಂಬೊ: ಆನ್‌ಲೈನ್ ಹಣಕಾಸು ವಂಚನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನಿಷ್ಠ 60 ಭಾರತೀಯರನ್ನೊಳಗೊಂಡ ಗುಂಪನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ ಬಂಧಿಸಿದೆ.

ಕೊಲಂಬೊದ ಉಪನಗರಗಳಾದ ಮಡಿವೇಲಾ ಮತ್ತು ಬಟ್ಟರಮುಲ್ಲಾ ಮತ್ತು ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಿಂದ ಗುರುವಾರ ಭಾರತೀಯರನ್ನು ಬಂಧಿಸಲಾಗಿದೆ.

ಪೊಲೀಸ್ ವಕ್ತಾರ ಎಸ್‌ಎಸ್‌ಪಿ ನಿಹಾಲ್ ತಲ್ದುವಾ ಅವರ ಪ್ರಕಾರ, ಸಿಐಡಿ ಮಡಿವೇಲಾ, ಬಟ್ಟರಮುಲ್ಲಾ ಮತ್ತು ನೆಗೊಂಬೊ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, 135 ಮೊಬೈಲ್ ಫೋನ್‌ಗಳು ಮತ್ತು 57 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಂವಾದ ನಡೆಸಿ ಹಣ ಸಂಪಾದಿಸಬಹುದು ಎಂದು ವಾಟ್ಸಾಪ್ ಗ್ರೂಪ್‌ ಮೂಲಕ ಆಮಿಷವೊಡ್ಡಿದ್ದು, ಆಮಿಷಕ್ಕೆ ತುತ್ತಾಗಿ ವಂಚನೆಗೆ ಒಳಗಾದ ಸಂತ್ರಸ್ತೆ ನೀಡಿದ ದೂರ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಲ್ದುವಾ ಹೇಳಿದ್ದಾರೆ.

ಬಂಧಿತ ಆರೋಪಿಗಳು ದುಬೈ ಮತ್ತು ಅಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದ್ದು, ಇವರೆಲ್ಲ ಹಣಕಾಸು ವಂಚನೆ, ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಗ್ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರು ಹಾಗೂ ವಿದೇಶಿಯರು ಸಹ ಇವರ ಮೋಸದ ಜಾಲಕ್ಕೆ ಬಿದ್ದಿರುವ ಸಾಧ್ಯತೆ ಇದೆ. ತನಿಖೆ ಪ್ರಗತಿಯಲ್ಲಿದೆ ಎಂದು ನಿಹಾಲ್ ತಲ್ದುವಾ ಅವರು ತಿಳಿಸಿದ್ದಾರೆ.

No Comments

Leave A Comment