ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನದೊಂದಿಗೆ ಮೂವರು ಪ್ರಯಾಣಿಕರ ಬಂಧನ

ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಪ್ತಚರ ವಿಭಾಗದ ಮಾಹಿತಿಯ ಆಧಾರದಲ್ಲಿ ಮೂವರು ಪ್ರಯಾಣಿಕರನ್ನು ಚಿನ್ನದ ಸಹಿತ ಬಂಧಿಸಿದ್ದಾರೆ.

ಮೂವರು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಬಳಿ 52 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಇರುವುದು ಪತ್ತೆಯಾಗಿದೆ. ಬಂಧಿತರ ಪೈಕಿ ಓರ್ವ ಮಹಿಳೆಯೂ ಇದ್ದಾರೆ. ಮೂವರೂ ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರು ತಲುಪಿದ್ದರು.

ಜೂನ್ 24 ಮತ್ತು 25 ರ ಮಧ್ಯರಾತ್ರಿಯಲ್ಲಿ ವಶಪಡಿಸಿಕೊಂಡ ಚಿನ್ನದ ಒಟ್ಟು ತೂಕ 731.5 ಗ್ರಾಂ. ಇದ್ದು, ಬಂಧಿತರೆಲ್ಲರೂ ತಮ್ಮ ಬಟ್ಟೆಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಬ್ಯಾಂಕಾಕ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ ತಮಿಳುನಾಡಿನ ವೆಲ್ಲೂರು ಮೂಲದ ಪುರುಷ ಪ್ರಯಾಣಿಕರಿಂದ ಮೊದಲು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ. ಒಟ್ಟು 315 ಗ್ರಾಂ ತೂಕದ 22.49 ಲಕ್ಷ ಮೌಲ್ಯದ ಮೂರು ಚಿನ್ನದ ಬಿಸ್ಕತ್‌ಗಳು ಮತ್ತು ಒಂದು ಚಿಕ್ಕ ಚಿನ್ನದ ಪಟ್ಟಿಯನ್ನು ಅವರು ಹೊಂದಿದ್ದರು. ಅನುಮಾನದ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ”. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಾಯ್ ಲಯನ್ ಏರ್‌ಲೈನ್ಸ್‌ನ ಎಸ್‌ಎಲ್ 216 ವಿಮಾನದ ಮೂಲಕ ಪ್ರಯಾಣಿಕರು ಆಗಮಿಸಿದ್ದರು.

ಎರಡನೇ ಪ್ರಕರಣವು ಇಂಡಿಗೋ ವಿಮಾನದಲ್ಲಿ (6E 1486) ದುಬೈನಿಂದ ಆಗಮಿಸಿದ ಬೆಂಗಳೂರಿನ ಮಹಿಳೆಗೆ ಸಂಬಂಧಿಸಿದೆ. “ಆಕೆ ತನ್ನ ಬಟ್ಟೆಯ ಕೆಳಗೆ ಒಂದು ಚಿನ್ನದ ಸರ ಮತ್ತು ನಾಲ್ಕು ಬಳೆಗಳನ್ನು ಬಚ್ಚಿಟ್ಟಿದ್ದರು. 300 ಗ್ರಾಂ ತೂಕದ ಕಳ್ಳಸಾಗಾಣಿಕೆ ವಸ್ತುಗಳನ್ನು ಪತ್ತೆಹಚ್ಚಲು ಪ್ರೊಫೈಲಿಂಗ್, ಪರಿಶೀಲನೆ ಸಹಾಯ ಮಾಡಿತು ಎಂದು ಮೂಲಗಳು ತಿಳಿಸಿವೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ 21,20,400 ರೂ. ಆಗಿದೆ.

ಮೂರನೇ ಪ್ರಕರಣದಲ್ಲಿ 116.5 ಗ್ರಾಂ ತೂಕದ ಚಿನ್ನದ ಬಿಸ್ಕತ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. 8.31 ಲಕ್ಷ ಮೌಲ್ಯದ ಬಿಸ್ಕೆಟ್ ಅನ್ನು ಪ್ಯಾಂಟ್ ಜೇಬಿನಲ್ಲಿ ಆತ ಬಚ್ಚಿಟ್ಟಿದ್ದರು. ಅವರು ಇಂಡಿಗೋ ಅರೇಬಿಯಾ ವಿಮಾನದಲ್ಲಿ ಶಾರ್ಜಾದಿಂದ ಬೆಂಗಳೂರಿಗೆ ಬಂದಿದ್ದರು.

No Comments

Leave A Comment