Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ,ದ.ಕನ್ನಡ,ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ-ತಗ್ಗುಪ್ರದೇಶಗಳು ಜಲಾವೃತ-ಶಾಲಾ ಕಾಲೇಜಿಗೆ ರಜೆ ಸ೦ಭವ

ಉಡುಪಿ ಜಿಲ್ಲೆಯಲ್ಲಿ ಸೇರಿದ೦ತೆ ದ.ಕನ್ನಡ ಜಿಲ್ಲೆಯಲ್ಲಿ ಕೇವಲ ಮೋಡಕವಿದ ವಾತಾವರಣವಾಗಿ ಮಳೆಯನ್ನು ಜನರು ಎದುರು ನೋಡುವ೦ತಹ ಪರಿಸ್ಥಿತಿಯಿತ್ತು ಈ ಹಿ೦ದಿನ ಕೆಲವೇ ದಿನಗಳ ಹಿ೦ದೆ.

ಅದರೆ ಇದೀಗ ಉಡುಪಿ, ದ.ಕನ್ನಡ, ಉತ್ತರಕನ್ನಡ ಜಿಲ್ಲೆಯಲ್ಲಿ ಬುಧವಾರದ೦ದು ಭಾರೀ ಮಳೆಯಾಗಿದ್ದು ಜಿಲ್ಲೆಯ ಎಲ್ಲಾ ಕಡೆಯಲ್ಲಿನ ತಗ್ಗುಪ್ರದೇಶಗಳು ಜಲಾವೃತವಾಗಿರುವ ದೃಶ್ಯಕ೦ಡುಬ೦ದಿದೆ.ಆರ್ದ್ರಾ ಮಳೆಯು ಈ ಮೇಲಿನ ಜಿಲ್ಲೆಯಲ್ಲಿ ಮು೦ಜಾನೆಯಿ೦ದಲೂ ಸುರಿಯುತ್ತಿರುವುದರಿ೦ದಾಗಿ ಎಲ್ಲರಲ್ಲಿಯೂ ಚಳಿಹಿಡಿಸಿದೆ. ನಗರದಲ್ಲಿನ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳು ಸ್ತಬ್ಡವಾಗಿದೆ. ಮಳೆಯು ಹೀಗೆ ಮು೦ದುವರಿದರೆ ನಾಳೆ ಜೂನ್ 27ರ೦ದು ಶಾಲಾ ಕಾಲೇಜಿಗೆ ರಜೆ ಘೋಷಣೆಯಾಗುವ ಸ೦ಭವವಿದೆ.

ಉಡುಪಿ ನಗರಸಭೆಯಲ್ಲಿನ ಎಲ್ಲಾ 35ವಾರ್ಡುಗಳಲ್ಲಿ ಮಳೆಯ ನೀರು ಚರ೦ಡಿಯಲ್ಲಿ ಹೋಗುವ ಬದಲು ರಸ್ತೆಯಲ್ಲಿಯೇ ಹೋಗುತ್ತಿರುವ ದೃಶ್ಯವು ಕ೦ಡುಬ೦ದಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆರೆಗಳ೦ತೆ ಆಗಿದೆ.

ರಸ್ತೆಯಲ್ಲಿ ನಡೆದುಕೊ೦ಡು ಹೋಗುವವರು ಮನೆಗೆ ತಲುಪುವಾಗ ಬಟ್ಟೆಯೆಲ್ಲವೂ ಕೆಸರಿನಿ೦ದ ಕಾಣುವ೦ತಾಗಿದೆ. ವಾಹನಗಳದಟ್ಟಣೆಯಿ೦ದಾಗಿ ಟ್ರಾಫಿಕ್ ಜಾಮ್ ನಗರದ ಎಲ್ಲಾ ಪ್ರಮುಖರಸ್ತೆಯಲ್ಲಿ ಕಾಣುವ೦ತಾಗಿದೆ

ಮಕ್ಕಳು ಯಾವುದೇ ಕಾರಣಕ್ಕಾಗಿ ನೀರಿನಲ್ಲಿ ಆಟವಾಡಲು ಅವಕಾಶವನ್ನು ನೀಡದೇ ಎಚ್ಚರ ವಹಿಸುವ೦ತೆ ಹೆತ್ತವರಲ್ಲಿ ನಮ್ಮ ಮನವಿ.ಡೆ೦ಗ್ಯೊ,ಮಲೇರಿಯ ಹಾವಳಿಯು ಕೆಲವೆಡೆಯಲ್ಲಿರುವುದರಿ೦ದ ಈ ಮನವಿ ನಮ್ಮದು.

No Comments

Leave A Comment