ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ! ಬ್ಯಾನ್​ ಆಗುತ್ತಾ ಪಾನಿಪುರಿ?

ಬೆಂಗಳೂರು, ಜೂನ್​ 27: ಗೋಬಿ ಮಂಚೂರಿ  ಕಬಾಬ್​​ಗೆ  ಕ್ಯಾನ್ಸರ್​  ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ  ಇವುಗಳಿಗೆ ಬಳಸುವ ಕೃತಕ ಬಣ್ಣವನ್ನು ಬ್ಯಾನ್​​ ಮಾಡಿದೆ. ಇದೀಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾನಿಪುರಿ  ಪ್ರಿಯರಿಗೂ ಶಾಕ್​​ ನೀಡಲು ಸದ್ದಿಲ್ಲದೆ ತಯಾರಿ ನಡೆಸಿದೆ. ಗೋಬಿ, ಕಬಾಬ್ ಬಳಿಕ ಈಗ ಪಾನಿಪುರಿಗೆ ಬಳಸುವ ಸಾಸ್​, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ ಪಾನಿಪೂರಿ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೆ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನ 49 ಕಡೆಗಳಲ್ಲಿ ಪಾನಿಪುರಿ ತಯಾರಿಕೆಗೆ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹೀಗಾಗಿ ಕ್ಯಾನ್ಸರ್ ಕಾರಕ ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್​ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಪಾನಿಪುರಿ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 243 ಮಾದರಿಗಳನ್ನು ಸಂಗ್ರಹಿಸಿದ್ದೇವು. 41 ಮಾದರಿಗಳಲ್ಲಿ ಅಸುರಕ್ಷಿತ ಅಂತ ಬಂದಿದೆ. 18 ಮಾದರಿಗಳು ಕಳಪೆ ಗುಣಪಟ್ಟದಿಂದ ಕೂಡಿವೆ. ಪಾನಿಪುರಿಯಲ್ಲಿ 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ನೂ 4-5 ಮಾದರಿಗಳ ಫಲಿತಾಂಶ ಬರಬೇಕಿದೆ. ಅವು ಬಂದ ಬಳಿಕ ಸಭೆ ನಡೆಸಿ, ಬಳಿಕ ಪಾನಿಪುರಿಗೆ ಬಳಸುವ ರಾಸಾಯನಿಕಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದರು.

ಪಾನಿಪುರಿಯಲ್ಲಿ ಬಳಸುವ ಕಾರ ಹಾಗೂ ಮಿಟಾದಲ್ಲಿ ರಾಸಾಯನಿಕಗಳು ಪತ್ತೆಯಾಗಿವೆ. ಕಾರ ಹೆಚ್ಚಾಗಿ ತಿನ್ನುವುದರಿಂದ ಅಸಿಡಿಟಿ, ಭೇದಿಯಾಗುತ್ತದೆ. ಹೆಚ್ಚಿಗೆ ಕಾರ ಇರುವ ಪಾನಿಪುರಿಯನ್ನು 5-7 ವರ್ಷ ತಿಂದರೆ ಅಲ್ಸರ್​ ಮತ್ತು ಕ್ಯಾನ್ಸರ್​ ರೋಗ ಬರುತ್ತದೆ ಎಂದು ತಿಳಿಸಿದರು.

No Comments

Leave A Comment